ರೈತರ ಮಕ್ಕಳಿಗೆ ನ್ಯಾಯ ಕೊಡಿ: ಮೈಸೂರಿನಲ್ಲಿ ರೈತರಿಂದ ಪ್ರತಿಭಟನೆ

Protest by farmers in Mysore
Published on

ಮೈಸೂರು: ಭೂಮಿ ಕಳೆದುಕೊಂಡ ರೈತರ ಕುಂಟುಂಬಕ್ಕೆ ಉದ್ಯೋಗ ಕೊಡಿಸಲು ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಕೆಐಎಡಿಬಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ಕೆಂಪಿಸಿದ್ದನಹುಂಡಿ ರೈತರು ಜಿಲ್ಲಾ ಕೈಗಾರಿಕಾ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು.

ಸಮಸ್ಯೆಂುನ್ನು ಖುದ್ದು ಬಗೆಹರಿಸುವುದಾಗಿ ಜಿಲ್ಲಾಧಿಕಾರಿಗಳು ಆಶ್ವಾಸನೆ ನೀಡಿದ್ದರರಿಂದ ಹೋರಾಟವನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಗಿತ್ತು. ಆದರೆ, ಭೂಮಿ ಕಳೆದುಕೊಂಡ ರೈತರ ಕುಂಟುಂಬದವರಿಗೆ ಂಾವುದೇ ರೀತಿಂು ಕೆಲಸ ನೀಡುವ ಬಗ್ಗೆ ಕ್ರಮ ಜರುಗಿಸದ ಕಾರಣ ಅಹೋರಾತ್ರಿ ಹೋರಾಟವನ್ನು ವಾಡಲಾಗುತ್ತಿದೆ ಎಂದು ರೈತರು ಹೇಳಿದರು.

ವರುಣ ಕ್ಷೇತ್ರದ ಕೆಂಪಿಸಿದ್ದನಹುಂಡಿ ಗ್ರಾಮದ ರೈತರ ಭೂಮಿಂುನ್ನು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆಂದು ಭೂಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆ ಸಂದರ್ಭದಲ್ಲಿ ನೀಡಿದ ಭರವಸೆಂುಂತೆ ರೈತರ ಕುಟುಂಬದ ಸದಸ್ಯರಿಗೆ ಕಾರ್ಖಾನೆಗಳಲ್ಲಿ ಖಾಂುಂ ಕೆಲಸ ನೀಡುವುದಾಗಿ ತಿಳಿಸಲಾಗಿತ್ತು. ಆದರೆ ಬಹುತೇಕ ಕಾರ್ಖಾನೆಗಳು ಉದ್ಯೋಗವನ್ನು ನೀಡಿಲ್ಲ ಎಂದು ಆರೋಪಿಸಿದರು.

ಂುುಬಿ, ಕಾಲ್ಸ್‌ಬರ್ಗ್, ಸ್ಟಾಟರ್ಜಿ, ಚೀಂುರ್ ಬಿವರೇಜೆಸ್, ಪಾರ್ಲೆ, ಆಗ್ರೋ, ಗ್ರೋವ್ಯಾಕ್ಸ್, ಏಷಿಂುನ್ ಪೇಂಟ್ ಕಾರ್ಖಾನೆಗಳು ಹತ್ತು ದಿನಗಳೊಳಗಾಗಿ ರೈತರ ಮಕ್ಕಳಿಗೆ ಕೆಲಸ ನೀಡಬೇಕು. ಇಲ್ಲವಾದಲ್ಲಿ ತೀವ್ರ ತರದ ಹೋರಾಟ ನಡೆಸಲಾಗುವುದು ಎಂದು ರೈತರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ರೈತರ ಮುಖಂಡರಾದ ಬೊಕ್ಕಹಳ್ಳಿ ನಂಜುಂಡಸ್ವಾಮಿ, ಎಚ್.ಎಂ.ಬಸವರಾಜು, ಉಮೇಶ್, ಮಂಜು, ರವಿ, ಮಧು, ಹೂವಮ್ಮ, ಮಂಜುಳಾ, ಶಿವಮ್ಮ, ನಾಗಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net