ಮತ್ತೊಮ್ಮೆ ಅವಕಾಶ ಮಾಡಿಕೊಡಿ

Give it another chance
ಎಂ.ಆರ್. ಪಾಟೀಲ, ಬಳ್ಳೊಳ್ಳಿ
Published on

ಇಂಡಿ: ಮರಗೂರದ ಭೀಮಾಶಂಕರ ಸಕ್ಕರೆ ಕಾರ್ಖಾನೆ ಕಟ್ಟಿ ಬೆಳೆಸಿದ ಯೋಗ್ಯರಿಗೆ ಮತದಾನ ಮಾಡುವ ಮೂಲಕ ಕಾರ್ಖಾನೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಮತ್ತೊಮ್ಮೆ ಅವಕಾಶ ಮಾಡಿಕೊಡಿ ಎಂದು ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಎಂ.ಆರ್. ಪಾಟೀಲ ಬಳ್ಳೊಳ್ಳಿ ಮನವಿ ಮಾಡಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಖಾನೆಯಲ್ಲಿ ಅಭಿವೃದ್ಧಿ ಕಾರ್ಯಗಳಾಗಬೇಕಾದರೆ ಎಲ್ಲರ ಸಹಮತವಿರಬೇಕು. ಆದರೆ ಕೆಲವರು ಬೇಕಂತಲೇ ಅಭಿವೃದ್ಧಿಗೆ ಅಡ್ಡಗಾಲು ಹೊಡೆಯುತ್ತಾರೆ. ಅಂತಹವರಿಗೆ ಕಾರ್ಖಾನೆಯ ಷೇರುದಾರರು ಮತದಾನ ಮಾಡಬಾರದು.

ಶವಂತರಾಯಗೌಡ ಪಾಟೀಲರ ನೇತೃತ್ವದ ಪೆನಲ್‌ಗೆ ಅಭೂತಪೂರ್ವ ಬೆಂಬಲ ಸಿಗುತ್ತಿದ್ದು, ಪೆನಲ್‌ನ ಎಲ್ಲ ಅಭ್ಯರ್ಥಿಗಳ ಗೆಲುವು ಶತಸಿದ್ಧವಾಗಿದೆ ಎಂದರು.

ಕಾರ್ಖಾನೆಯ ಬಗ್ಗೆ ಅತೀವ ಕಾಳಜಿ ಹೊಂದಿದ ಹಾಗೂ ಕಾರ್ಖಾನೆಯನ್ನು ಕಟ್ಟಿ ಇನ್ನಷ್ಟು ಉತ್ತಮವಾಗಿ ಬೆಳೆಸುವ ಗುರಿ ಹೊಂದಿದ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಹಾಗೂ ಅವರ ನೇತೃತ್ವದ ಎಲ್ಲ ಅಭ್ಯರ್ಥಿಗಳಿಗೆ ಮತದಾನ ಮಾಡಿ ಐತಿಹಾಸಿಕ ಗೆಲುವು ಸಾಧಿಸಲು ಸಹಕರಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net