ನಷ್ಟದ ಸರ್ವೇ ನಡೆಸಲು ಸೂಚನೆ ನೀಡಿ

15SND-01
ಜೋಳ ನೋಂದಣಿ, ಖರೀದಿ ಕೇಂದ್ರ ಸಮಯಕ್ಕೆ ಸರಿಯಾಗಿ ಆರಂಭಿಸುವುದು, ಕುರಿಗಾಹಿಗಳಿಗೆ ಗೋಮಾಳ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿ ಸೋಮವಾರ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ತಾಲೂಕು ಸಮಿತಿ ಸಿಂಧನೂರಿನ ತಹಸಿಲ್ ಕಚೇರಿ ಉಪತಹಸೀಲ್ದಾರ್ ಚಂದ್ರಶೇಖರರಿಗೆ ಮನವಿ ಸಲ್ಲಿಸಲಾಯಿತು. ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ, ಜಿಲ್ಲಾಧ್ಯಕ್ಷ ಶಿವಪುತ್ರಗೌಡ ನಂದಿಹಾಳ, ತಾಲೂಕು ಅಧ್ಯಕ್ಷ ನಾಗರಾಜ ಭಿಂಗಿ, ತಾಲೂಕು ಕಾರ್ಯಾಧ್ಯಕ್ಷ ನಿರುಪಾದೆಪ್ಪ ಅಡ್ಡಿ, ನಗರ ಘಟಕ ಅಧ್ಯಕ್ಷ ರವಿ ಬಸಾಪುರ ಇದ್ದರು.
Published on

ಸಿಂಧನೂರು: ಜೋಳ ನೋಂದಣಿ, ಖರೀದಿ ಕೇಂದ್ರ ಸಮಯಕ್ಕೆ ಸರಿಯಾಗಿ ಆರಂಭಿಸುವುದು, ಕುರಿಗಾಹಿಗಳಿಗೆ ಗೋಮಾಳ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ತಾಲೂಕು ಸಮಿತಿ ತಹಸಿಲ್ ಕಚೇರಿ ಉಪತಹಸೀಲ್ದಾರ್ ಚಂದ್ರಶೇಖರಗೆ ಮನವಿ ಸಲ್ಲಿಸಲಾಯಿತು.

ತಾಲೂಕಿನಲ್ಲಿ ಪ್ರತಿ ಬಾರಿಯು ಜೋಳದ ರಾಶಿ ಮುಗಿದು ತಿಂಗಳು ಕಳೆದರೂ ಜೋಳ ನೋಂದಣಿ, ಖರೀದಿ ಪ್ರಕ್ರಿಯೆ ಆರಂಭಿಸಿದೆ ಸರ್ಕಾರ ನಿರ್ಲಕ್ಷ್ಯ ತೋರಿಸುತ್ತಾ ಬಂದಿದ್ದು ಇದರಿಂದ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಕಳೆದ ಬಾರಿಯು ನೋಂದಣಿ, ಖರೀದಿ ವಿಳಂಬದಿಂದ ಇನ್ನೂ ಕೆಲ ರೈತರಿಗೆ ಹಣವೇ ಖಾತೆಗೆ ಜಮಾವಣೆಯಾಗಿಲ್ಲ.

ಈಗ ನಿರಂತರ ಮಳೆಯಿಂದ ಬಿತ್ತಿದ ಜೋಳದ ಬೆಳೆಯು ನಷ್ಟವಾಗುತ್ತಿದ್ದು ಕೂಡಲೇ ನಷ್ಟದ ಸರ್ವೇ ನಡೆಸಲು ಸೂಚನೆ ನೀಡಬೇಕು. ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ತಾಲೂಕಿನಲ್ಲಿ ಅನೇಕ ಕುರಿಗಳನ್ನು ನಂಬಿಕೊಂಡು ಇರುವ ಕುಟುಂಬಗಳು ಬಹಳ ಇರುವುದರಿಂದ ಗೋಮಾಳ ವ್ಯವಸ್ಥೆ ಮಾಡಬೇಕೆನ್ನುವ ಇತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.

ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ, ಜಿಲ್ಲಾಧ್ಯಕ್ಷ ಶಿವಪುತ್ರಗೌಡ ನಂದಿಹಾಳ, ತಾಲೂಕು ಅಧ್ಯಕ್ಷ ನಾಗರಾಜ ಭಿಂಗಿ, ತಾಲೂಕು ಕಾರ್ಯಾಧ್ಯಕ್ಷ ನಿರುಪಾದೆಪ್ಪ ಅಡ್ಡಿ, ನಗರ ಘಟಕ ಅಧ್ಯಕ್ಷ ರವಿ ಬಸಾಪುರ, ಅಡಿವೆಪ್ಪ ಕೆಂಗಲ್, ಯಮನಪ್ಪ ಪಗಡದಿನ್ನಿ, ಶಿವರಾಜ ಸಾಸಲಮರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net