ರಾಜಕಾಲುವೆ ಒತ್ತುವರಿ ಬಗ್ಗೆ ಮಾಹಿತಿ ನೀಡಿ: ಸಾರ್ವಜನಿಕರಿಗೆ ಬಿಬಿಎಂಪಿ ಮನವಿ

bbmp building
Published on

ಬೆಂಗಳೂರು: ರಾಜಧಾನಿಯಲ್ಲಿ ಬೃಹತ್ ನೀರುಗಾಲುವೆ ಒತ್ತುವರಿ ಗುರುತಿಸಲು ಬಿಬಿಎಂಪಿ, ಸಾರ್ವಜನಿಕರ ಮೊರೆ ಹೋಗಿದೆ.

ರಾಜಕಾಲುವೆಗಳ ಮೇಲೆ ಹೊಸದಾಗಿ ಒತ್ತುವರಿ ಮಾಡಿಕೊಂಡಿದ್ದಲ್ಲಿ ತುರ್ತಾಗಿ ಗುರುತಿಸಿ ತೆರವುಗೊಳಿಸಲು ಹೈಕೋರ್ಟ್ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಥಮಿಕ, ದ್ವಿತೀಯ ಹಂತಗಳ ರಾಜಕಾಲುವೆಗಳನ್ನು ಕಾನೂನುಬಾಹಿರವಾಗಿ ಒತ್ತುವರಿ ಮಾಡಿಕೊಂಡಿರುವ ಮಾಹಿತಿಯನ್ನು ಸೆ.20ರೊಳಗೆ ಸಾರ್ವಜನಿಕರು ಭಾವಚಿತ್ರದೊಂದಿಗೆ ಆಯಾ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ಸಲ್ಲಿಸಬೇಕು ಎಂದು ಪಾಲಿಕೆ ಆದೇಶಿಸಿದೆ.

ಒತ್ತುವರಿ ತೆರವುಗೊಳಿಸಿ ರಾಜಕಾಲುವೆ ನಿರ್ಮಿಸಿದರೆ ಮಳೆನೀರು ಸರಾಗವಾಗಿ ಹರಿಯಲಿದೆ. ಇದರಿಂದಾಗಿ ಮಳೆಗಾಲದಲ್ಲಿ ಉಂಟಾಗುವ ಪ್ರವಾಹ ಹಾನಿಯನ್ನು ತಡೆಯಬಹುದು. ಹೀಗಾಗಿ, ಪೂರ್ವ ವಲಯ 9480683667, ಪಶ್ಚಿಮ ವಲಯ 9480685443, ದಕ್ಷಿಣ ವಲಯ 99648 43326, ಕೋರಮಂಗಲ ಕಣಿವೆ 9342019909, ಯಲಹಂಕ ವಲಯ 8892939394, ಮಹದೇವಪುರ ವಲಯ 9480683015, ಬೊಮ್ಮನಹಳ್ಳಿ ವಲಯ 9844254135, ರಾಜರಾಜೇಶ್ವರಿನಗರ ವಲಯ 94483 03753 ಹಾಗೂ ದಾಸರಹಳ್ಳಿ ವಲಯ 90368 88707 ಮೊಬೈಲ್ ಸಂಖ್ಯೆ ಹೊಂದಿರುವ ಕಾರ್ಯಪಾಲಕ ಅಭಿಯಂತರರಿಗೆ, ಸ್ಥಳೀಯ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಒತ್ತುವರಿ ಬಗ್ಗೆ ಗಮನಕ್ಕೆ ಬಂದರೆ ಭಾವಚಿತ್ರ ಸಮೇತ ದೂರು ನೀಡಬಹುದು ಎಂದು ಬಿಬಿಎಂಪಿ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net