

ಮೈಸೂರು: ಸ್ವಂುಂ ಆಸಕ್ತಿಯ ಓದು, ಪರಿಶ್ರಮ, ನಿರಂತರ ಚಟುವಟಿಕೆ, ಪ್ರಾವಾಣಿಕತೆಯಿಂದ ಎಂತಹ ಸಾಧನೆಂುೂ ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.
ಮಹಾರಾಜ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಸಮಿತಿಯಿಂದ ಮಂಗಳವಾರ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಪಠ್ಯೇತರ ಚಟುವಟಿಕೆಗಳು ಹಾಗೂ ಪ್ರತಿಭಾನ್ವೇಷಣಾ ಕಾಂರ್ುಕ್ರಮ ಉದ್ಘಾಟಿಸಿ ಅವರು ವಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಂುುಗದಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಜತೆಗೆ ಕ್ರೀಡೆ, ಕಲೆ, ಸಂಗೀತ, ಸಾಹಿತ್ಯ, ನೃತ್ಯ ಮುಂತಾದ ಚಟುವಟಿಕೆಗಳಲ್ಲೂ ಆಸಕ್ತಿ ಬೆಳೆಸಿಕೊಳ್ಳಬೇಕು. ಪಠ್ಯಗಳಿಗೆ ನೀಡಿದಷ್ಟೆ ಮಹತ್ವವನ್ನು ಪಠ್ಯೇತರ ಚಟುವಟಿಕೆಗಳಿಗೂ ಕೊಡಬೇಕು. ಸವಾಜದ ದೈನಂದಿನ ಆಗು ಹೋಗುಗಳ ಬಗ್ಗೆ ಅರಿವು ಹೊಂದಿರಬೇಕು ಎಂದರು.
ಜಾನಪದ ಗಾಯಕ ಜೋಗಿಲ ಸಿದ್ದರಾಜು ಮಾತನಾಡಿ, ಇಂದು ಎಲ್ಲರೂ ಮೊಬೈಲ್ ಪ್ರೇಮಿಗಳಾಗಿದ್ದಾರೆ. ಸಮೀಕ್ಷೆಯ ಪ್ರಕಾರ ಇಂದಿನ ಯುವಕರಿಗೆ ಪ್ರೇಮ ನಿವೇದನೆ ಮಾಡಲು ಕೂಡ ಧೈರ್ಯ ಇಲ್ಲ. ವಾಟ್ಸ್‌ಆ್ಯಪ್, ಇನ್ಸ್ಟಾಗ್ರಾಂಗಳ ಮೂಲಕ ಪ್ರೇಮ ನಿವೇದನೆ ಮಾಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರು ಬೆಳೆದಿರುವ ವಾತಾವರಣ ಮತ್ತು ಆಹಾರ ಪದ್ಧತಿ ಎಂದರು.
ಮಹಾರಾಜ ಕಾಲೇಜು ಇತಿಹಾಸ ವಿಭಾಗದ ಪ್ರಾಧ್ಯಾಪಕ ಎನ್.ಬಿಳಿಗಿರಿ ಅವರ ‘ವಿಶ್ವ ನಾಗರಿಕ ಇತಿಹಾಸ’ ಪುಸ್ತಕ ಬಿಡುಗಡೆ ಮಾಡಲಾಯಿತು. ಮಹಾರಾಜ ಕಾಲೇಜು ಪ್ರಾಂಶುಪಾಲ ಪ್ರೊ.ಎಚ್.ಸಿ.ದೇವರಾಜೇಗೌಡ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಪ್ರೊ.ವಿ.ಷಣ್ಮುಗಂ ಸಂವಿಧಾನ ಪೀಠಿಕೆ ಬೋಧಿಸಿದರು. ಪಠ್ಯೇತರ ಚಟುವಟಿಕೆಗಳ ಸಮಿತಿ ಸಂಚಾಲಕ ಪ್ರೊ.ರಾಚಂ್ಯು, ಸಮಿತಿ ಸದಸ್ಯರಾದ ಡಾ.ಕೆ.ಎನ್.ಬಸವರಾಜು, ಡಾ.ಜ್ಞಾನಪ್ರಕಾಶ್ ಇತರರಿದ್ದರು.
ಜೋಗಿಲ ಸಿದ್ದರಾಜು ಅವರು ‘ಗಾಡಿಯ ದಾರಿ ಸಾಗಲಿ.. ನಮ್ಮ ಊರನು ಬೇಗ ಸೇರಲಿ’…, ‘ಗುರುವೇ ನಿನ್ನಾಟ ಬಲ್ಲವರ‌್ಯಾರೊ’… ಸೇರಿದಂತೆ ಅನೇಕ ಜನಪದ ಗೀತೆಗಳನ್ನು ಹಾಡಿದರು.