ಕ್ಷೀರಭಾಗ್ಯಕ್ಕೆ ತಕ್ಷಣ ಅನುದಾನ ನೀಡಿ

18 ಎಸ್ಕೆಇ 1
ಶಿಕಾರಿಪುರದ ಅಂಗನವಾಡಿಗೆ ಜಯ ಕರ್ನಾಟಕ ಜನಪರ ವೇದಿಕೆ ಪದಾಧಿಕಾರಿಗಳು ಭೇಟಿ ನೀಡಿದರು.
Published on

ಶಿಕಾರಿಪುರ: ಕಳೆದ ಆರು ತಿಂಗಳಿನಿಂದ ಅಂಗನವಾಡಿ ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಕ್ಷೀರ ಭಾಗ್ಯ ಯೋಜನೆ ಅಡಿ ಹಾಲು ವಿತರಿಸದಿರುವುದು ದೌರ್ಭಾಗ್ಯ ಎಂದು ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲಗಿ ಕೃಷ್ಣ ಹೇಳಿದರು.

ಸರ್ಕಾರ ತಕ್ಷಣ ಹಾಲು ವಿತರಣೆಗೆ ಹಣ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು. ಸರ್ಕಾರ ಗ್ಯಾರಂಟಿ ಯೋಜನೆಗಳ ಪ್ರಚಾರಕ್ಕಾಗಿ ಕೋಟ್ಯಂತರ ರೂ. ವ್ಯಯ ಮಾಡುತ್ತಿದೆ. ಆದರೆ ತಾಲೂಕಿನಲ್ಲಿ ಕೆಎಂಎಫ್‌ಗೆ ಬಾಕಿ ಇರುವ ಹಣವನ್ನು ಪಾವತಿಸಲು ಇಲಾಖೆಗೆ ಅನುದಾನ ನೀಡಲು ಸರ್ಕಾರದಿಂದ ಆಗಿಲ್ಲ. ಇನ್ನಾದರೂ ಮಕ್ಕಳು, ಬಾಣಂತಿಯರು, ಗರ್ಭಿಣಿಯರ ಬಗ್ಗೆ ಕಾಳಜಿಯಿದ್ದರೆ ತಕ್ಷಣ ಅನುದಾನ ಬಿಡುಗಡೆ ಮಾಡಬೇಕು ಎಂದರು.
ತಾಲೂಕು ಅಧ್ಯಕ್ಷ ಎನ್.ಶಿವಯ್ಯ ಶಾಸ್ತ್ರಿ, ಪ್ರಮುಖರಾದ ಮುಕ್ರಂ, ಹುಲ್ಮಾರ್ ಸಣ್ಣಪ್ಪ, ಯಮುನಪ್ಪ, ಮಹೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net