

ಸಂಡೂರು: ತಾಲೂಕಿನ ಭುಜಂಗನಗರ ಗ್ರಾಪಂಗೆ ಕೆಎಂಇಆರ್‌ಸಿಯಿಂದ 154 ಮನೆಗಳು ಮಂಜೂರಾಗಿದ್ದು, ಫಲಾನುಭವಿಗಳಾಗಿ ಸಾಮಾನ್ಯ ವರ್ಗದ ಜನರನ್ನು ಮಾತ್ರ ಆಯ್ಕೆ ಮಾಡಲಾಗಿದೆ ಎಂದು ದೂರಿ ತಾಪಂ ಇಒ ರೇಣುಕಾಚಾರ್ಯ ಸ್ವಾಮಿಗೆ ಗ್ರಾಮಸ್ಥರು ಮಂಗಳವಾರ ಮನವಿ ಸಲ್ಲಿಸಿದರು.
ಇದನ್ನೂ ಓದಿ:ಬೇಡಿಕೆಗಳ ಈಡೇರಿಕೆಗಾಗಿ ಶಾಸಕರಿಗೆ ಮನವಿ
ಆಸ್ತಿ, ಎರಡು ಮನೆಗಳಿರುವವರನ್ನೂ ಫಲಾನುಭವಿಗಳನ್ನಾಗಿ ಆಯ್ಕೆ ಮಾಡಲಾಗಿದೆ. ಸಾಮಾನ್ಯ ವರ್ಗದಲ್ಲೂ ಬಡವರಿದ್ದಾರೆ. ಅವರಿಗೆ ಕೊಡುವಲ್ಲಿ ನಮ್ಮ ತಕರಾರಿಲ್ಲ. ಆದರೆ, ಎಸ್ಸಿ, ಎಸ್ಟಿ, ಒಬಿಸಿ ಸಮುದಾಯದ ಜನರಿಗೂ ಮನೆಗಳನ್ನು ಮಂಜೂರು ಮಾಡಬೇಕು. ನಾವು ಹಲವಾರು ವರ್ಷಗಳಿಂದ ಹರಿಜನ ಕೇರಿಯಲ್ಲಿ ವಾಸ ಮಾಡುತ್ತಿದ್ದೇವೆ. 70ರಿಂದ 80 ವರ್ಷದಿಂದ ಸರ್ಕಾರಿ ಸ್ಥಳದಲ್ಲಿ ವಾಸವಾಗಿದ್ದು, ವಾಸ ಸ್ಥಳಕ್ಕೆ ಸಂಬಂಧಿಸಿದ ಸರಿಯಾದ ದಾಖಲೆಗಳಿಲ್ಲ ಎಂದು ಹೇಳಿದರು.
ತಾಪಂ ಇಒ ರೇಣುಕಾಚಾರ್ಯ ಸ್ವಾಮಿ ಮಾತನಾಡಿ, ಕೆಎಂಆರ್‌ಸಿಇ ಯೋಜನೆಯಡಿ ಅನಿಯಮಿತ ಮನೆಗಳನ್ನು ಮಂಜೂರು ಮಾಡಲಾಗುವುದು. ಸ್ವಂತ ಜಾಗ ಇಲ್ಲದವರಿಗೆ ನಿವೇಶನದೊಂದಿಗೆ ಮನೆ ನಿರ್ಮಿಸಿಕೊಡಲಾಗುವುದು ಎಂದರು.