ಹಿಂದು ರುದ್ರಭೂಮಿ ಅಭಿವೃದ್ಧಿಗೆ ಅನುದಾನ ನೀಡಿ

10 YLP 3
Published on

ಯಲ್ಲಾಪುರ: ಹಿಂದು ರುದ್ರಭೂಮಿ ಅಭಿವೃದ್ಧಿಗೆ ಅನುದಾನ ಮೀಸಲಿಡಬೇಕೆಂದು ಆಗ್ರಹಿಸಿ ವಿಶ್ವ ಹಿಂದು ಪರಿಷತ್ ತಾಲೂಕು ಘಟಕದಿಂದ ಪಪಂ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಪಟ್ಟಣದ ಹುಬ್ಬಳ್ಳಿ ರಸ್ತೆ ಪಕ್ಕ ಇರುವ ಹಿಂದು ರುದ್ರಭೂಮಿ ನಿರ್ವಹಣೆ ಇಲ್ಲದೇ ಸೊರಗಿದೆ. ಶವ ಸಂಸ್ಕಾರ ಕಟ್ಟೆಗಳು ಶಿಥಿಲವಾಗಿವೆ. ವಿದ್ಯುತ್ ದೀಪ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದರಿಂದ ರಾತ್ರಿ ಶವ ಸಂಸ್ಕಾರಕ್ಕೆ ಅಡಚಣೆ ಉಂಟಾಗುತ್ತಿದೆ. ರುದ್ರಭೂಮಿ ಆವರಣದೊಳಗೆ 100 ಮೀ ರಸ್ತೆ ಕಾಂಕ್ರೀಟಿಕರಣಗೊಳಿಸಬೇಕು. ಶೆಡ್ ದುರಸ್ತಿಗೊಳಿಸಿ, ಮೂಲಭೂತ ಸೌಕರ್ಯ ಒದಗಿಸಬೇಕು. ಶವ ಸಂಸ್ಕಾರದ ವೇಳೆ ಬಂದ ಜನರಿಗೆ ಕುಳಿತುಕೊಳ್ಳಲು ತಂಗುದಾಣ, ಕಟ್ಟಿಗೆ ಇಡಲು ಶೆಡ್ ನಿರ್ಮಾಣ ಇತ್ಯಾದಿಗಳಿಗೆ ಅನುದಾನ ಮೀಸಲಿಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ತಾಲೂಕಾಧ್ಯಕ್ಷ ಗಜಾನನ ನಾಯ್ಕ, ಪ್ರಮುಖರಾದ ರಾಮು ನಾಯ್ಕ, ಶ್ಯಾಮಿಲಿ ಪಾಟಣಕರ, ಅನಂತ ಗಾಂವ್ಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net