ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಿ

10 ckm 4
ಚಿಕ್ಕಮಗಳೂರಿನ ಮೇದರಹಳ್ಳಿ ಮೀನುಗಾರಿಕೆ ಸಹಕಾರ ಸಂಘದಿಂದ ಶಾಸಕ ಎಚ್.ಡಿ.ತಮ್ಮಯ್ಯ ಅವರನ್ನು ಅಭಿನಂದಿಸಲಾಯಿತು.
Published on

ಚಿಕ್ಕಮಗಳೂರು: ನಾಲ್ಕು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಮೇದರಹಳ್ಳಿ ಮೀನುಗಾರಿಕೆ ಸಹಕಾರ ಸಂಘಕ್ಕೆ ಸಮುದಾಯ ಭವನ ನಿರ್ಮಿಸಲು ಅನುದಾನ ಒದಗಿಸುವಂತೆ ಸಂಘದ ಪದಾಧಿಕಾರಿಗಳು ಶಾಸಕ ಎಚ್.ಡಿ.ತಮ್ಮಯ್ಯ ಅವರಿಗೆ ಬಧುವಾರ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ರಾಜ್‌ಅಹ್ಮದ್ ಮಾತನಾಡಿ, ಮೀನುಗಾರಿಕೆ ಸಹಕಾರ ಸಂಘ ಹಲವಾರು ವರ್ಷಗಳಿಂದ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಂಘದಲ್ಲಿ ಈಗಾಗಲೇ 2569 ಸದಸ್ಯರಿದ್ದು, ಇವರ ಪೈಕಿ ಅರ್ಧದಷ್ಟು ಮಂದಿ ಮೀನುಗಾರಿಕೆ ವೃತ್ತಿಯನ್ನೇ ಕಸುಬಾಗಿಸಿಕೊಂಡಿದ್ದಾರೆ ಎಂದರು.
ಸಂಘದ ಬೆಳವಣಿಗೆ ದೃಷ್ಟಿಯಿಂದ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸದೃಢವಾಗಲು ಬೆಳವಾಡಿ ಗ್ರಾಮದಲ್ಲಿ ಸಂಘದ ನಿವೇಶನವಿದ್ದು, ಆ ಜಾಗದಲ್ಲಿ ಸಮುದಾಯ ನಿರ್ಮಿಸಲು ಅನುದಾನ ಒದಗಿಸಿದರೆ ಸಂಘದ ಸಭೆ, ಸಮಾರಂಭ ಹಾಗೂ ಕಾರ್ಯಕ್ರಮ ಆಯೋಜಿಸಲು ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷೆ ರಾಧಾಮಣಿ, ನಿರ್ದೇಶಕರಾದ ಹಿರೇಮಗಳೂರು ರಾಮಚಂದ್ರ, ಜಗದೀಶ್, ರಾಮೇಗೌಡ, ಇಮ್ತಿಯಾಜ್, ಎಂ.ಶಿವಣ್ಣ, ರಸೂಲ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಕೆಂಗೇಗೌಡ, ಬೆಳವಾಡಿ ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net