ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ನೀಡಿ

rbk 20-1 sayi
ಬನಹಟ್ಟಿಯಲ್ಲಿ ನಡೆದ ಸಂವರ್ಧನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಬಸವರಾಜ ಕೊಣ್ಣೂರ, ಜಗದೀಶ ಮೈತ್ರಿ, ಸಾಗರ ಚವಜ, ಸದಾಶಿವ ಗೋಂದಕರ, ಸಂಗಪ್ಪ ಉದಗಟ್ಟಿ, ಡಾ. ಇಂದುಮತಿ ಯಂಡೋಳಿ, ಮಲ್ಲಿಕಾರ್ಜುನ ತುಂಗಳ, ಅಜಯ ಬಾಣಕಾರ ಇತರರಿದ್ದರು.
Published on

ರಬಕವಿ/ಬನಹಟ್ಟಿ: ಮಕ್ಕಳಿಗೆ ಪಾಲಕರು ಬಾಲ್ಯದಲ್ಲೇ ಉತ್ತಮ ಸಂಸ್ಕಾರ, ಸಂಸ್ಕೃತಿ ನೀಡಬೇಕು. ಧಾರ್ಮಿಕ, ಸಾಂಸ್ಕೃತಿಕ ಮತ್ತು ವೈಚಾರಿಕ ಪ್ರತೀಕ ಮತ್ತು ವೈಚಾರಿಕ ಪ್ರಜ್ಞೆ ಮೂಡಿಸುವುದು ಅವಶ್ಯ ಇದೆ ಎಂದು ಬನಹಟ್ಟಿ ಹಿರೇಮಠದ ಶ್ರೀ ಶರಣಬಸವ ಶಿವಾಚಾರ್ಯರು ಹೇಳಿದರು.

ಬನಹಟ್ಟಿಯ ಕಾಡಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿ ಸೋಮವಾರ ನಡೆದ ‘ಸಂವರ್ಧನ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಇತರೆ ದೇಶಗಳ ಸಂಸ್ಕೃತಿಗಿಂತ ಭಾರತೀಯ ಸಂಸ್ಕೃತಿ ಹಿರಿಯದು. ಮಾನವೀಯ ಸಂಬಂಧಿಗಳಿಗೆ ಅತೀ ಹೆಚ್ಚಿನ ಒತ್ತು ನೀಡಿದ ದೇಶ ನಮ್ಮದು. ಸೌಹಾರ್ದತೆ, ಸಹಬಾಳ್ವೆ, ಧಾರ್ಮಿಕತೆಯ ಹಿರಿಮೆಯುಳ್ಳ ಪರಂಪರೆ ಭಾರತ. ಇಂತಹ ಐತಿಹಾಸಿಕ ಹಿನ್ನೆಲೆಯುಳ್ಳ ದೇಶವಿಂದು ಎಲ್ಲ ರಂಗದಲ್ಲೂ ಮುನ್ನಡೆ ಸಾಧಿಸುತ್ತಿದೆ. ಈ ಪರಿಕಲ್ಪನೆಯಿಂದ ದೇಶ ಸಂಪತ್ತು ಎಂದೇ ಬಣ್ಣಿಸಲಾಗುವ ಮಕ್ಕಳನ್ನು ಸುಸಂಸ್ಕೃತ ಹಾಗೂ ಸಚ್ಛಾರಿತ್ರೃವುಳ್ಳ ಪ್ರಜೆಗಳನ್ನಾಗಿಸುವ ಮೂಲಕ ಮಕ್ಕಳ ಭವಿಷ್ಯ ಉಜ್ವಲಗೊಳಿಸುವಲ್ಲಿ ಪೂರಕ ಕಾರ್ಯ ಪಾಲಕ- ಪೋಷಕರದ್ದಾಗಿದೆ ಎಂದರು.

ಸಾಹಿತಿ ಯಶವಂತ ವಾಜಂತ್ರಿ ಮಾತನಾಡಿ, ಧರ್ಮದ ಸನ್ಮಾರ್ಗದಲ್ಲಿ ಬದುಕು ನಿರ್ಮಿಸುವ ವ್ಯಕ್ತಿಗೆ ಯಶಸ್ಸು ನಿಶ್ಚಿತ. ಅನ್ಯಾಯ, ಶೋಷಣೆ, ಅನೀತಿ, ಅಧರ್ಮಕ್ಕೆ ಎಂದಿಗೂ ಜಯವಿಲ್ಲ. ದೈವಭಕ್ತಿ ಶ್ರದ್ಧೆಯಿಂದ ಸುಖ, ಶಾಂತಿ, ನೆಮ್ಮದಿ, ಶ್ರೇಯಸ್ಸು ಲಭಿಸಲಿದೆ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.

ಬಸವರಾಜ ಕೊಣ್ಣೂರ, ಜಗದೀಶ ಮೈತ್ರಿ, ಸಾಗರ ಚವಜ, ಸದಾಶಿವ ಗೋಂದಕರ, ಸಂಗಪ್ಪ ಉದಗಟ್ಟಿ, ಡಾ. ಇಂದುಮತಿ ಯಂಡೋಳಿ, ಮಲ್ಲಿಕಾರ್ಜುನ ತುಂಗಳ, ಅಜಯ ಬಾಣಕಾರ, ಕುಳ್ಳೋಳ್ಳಿ, ಸರೋಜಿನಿ ಬಳ್ಳಾರಿ, ದುಂಡಪ್ಪ ಗಾಣಿಗೇರ, ದುಂಡಪ್ಪ ಗಿರನ್ನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net