

ಬೆಳಗಾವಿ: ವೈದ್ಯರು ಬಡವರಿಗೆ ಉತ್ತಮ ವೈದ್ಯಕಿಯ ಸೇವೆ ನೀಡಬೇಕು. ಈಗ ತಂತ್ರಾನ ಅಭಿವೃದ್ಧಿಯಾಗುತ್ತಿದೆ. ಅದಕ್ಕೆ ತಕ್ಕಂತೆ ವೈದ್ಯರು ಕೃತಕ ಬುದ್ಧಿಮತ್ತೆ (ಎಐ) ಕುರಿತು ಅರಿವು ಹೊಂದಿರಬೇಕು ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯ ಪ್ರಭಾಕರ ಕೋರೆ ಹೇಳಿದರು.
ನಗರದ ಶಗುನ್ ಗಾರ್ಡನ್ನಲ್ಲಿ ಭಾನುವಾರ ಆಯೋಜಿಸಿದ್ದ ಸೆಂಟ್ರಾಕೇರ್ ಆಸ್ಪತ್ರೆ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವೈದ್ಯರು ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ಹೆಚ್ಚಿನ ಕಳಕಳಿ ಹೊಂದಬೇಕು. ವೃತ್ತಿ ಧರ್ಮ ಪಾಲಿಸಬೇಕು ಎಂದರು.
ಹಿಂದಿ ಚಿತ್ರನಟ ನಾನಾ ಪಾಟೇಕರ ಮಾತನಾಡಿ, ಪ್ರಸ್ತುತ ಎಲ್ಲರಿಗೂ ಹಣದ ಅವಶ್ಯಕತೆ ಇದೆ. ಆದರೆ, ಅಗತ್ಯವಿರುವಷ್ಟು ಹಣ ಖರ್ಚು ಮಾಡಿ, ಉಳಿದ ಹಣವನ್ನು ಅಭಿವೃದ್ಧಿ ಕಾರ್ಯ, ಸಮಾಜದ ಒಳಿತಿಗಾಗಿ ಮೀಸಲಿಡಬೇಕು ಎಂದರು. ವೈದ್ಯರು ತಮ್ಮ ವೃತ್ತಿ ಆರಾಧಿಸಿ, ಆನಂದಿಸಬೇಕು. ಆರೋಗ್ಯ ಸೇವೆಗಳು ಎಲ್ಲರಿಗೂ ತಲುಪಬೇಕು ಎಂದರು.
ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್ ಮಾತನಾಡಿ, ಹಿಂದೆಲ್ಲ ವೈದ್ಯರ ಸಂಖ್ಯೆ ಕಡಿಮೆ ಇತ್ತು, ರೋಗಗಳ ಸಂಖ್ಯೆಯೂ ಕಡಿಮೆ ಇತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ವೈದ್ಯರ ಸಂಖ್ಯೆ ಹೆಚ್ಚುತ್ತಿದೆ, ಹಾಗೆಯೇ ರೋಗಗಳ ಸಂಖ್ಯೆಯೂ ಬೆಳೆಯುತ್ತಿದೆ. ಆಸ್ಪತ್ರೆಗೆ ಬಂದ ರೋಗಿ ಆದಷ್ಟು ಬೇಗ ಮನೆಗೆ ಮರಳಬೇಕೆಂದು ಬಯಸುತ್ತಾನೆ. ಜನರು ವೈದ್ಯರಲ್ಲಿ ದೇವರ ಸ್ವರೂಪ ಕಾಣುತ್ತಾರೆ ಎಂದು ಹೇಳಿದರು.
ಬೆಳಗಾವಿಯ ಜನರಿಗೆ ಉತ್ತಮ ಸೇವೆ ಸಲ್ಲಿಸಬೇಕೆನ್ನುವ ಮಹದಾಸೆಯಿಂದ ಡಾ.ನೀತಾ ದೇಶಪಾಂಡೆ ಮತ್ತು ತಂಡದವರು ನೂತನ ಆಸ್ಪತ್ರೆ ಆರಂಭಿಸಿದ್ದಾರೆ. ಇದರಿಂದ ಅವರಿಗೂ, ಬೆಳಗಾವಿಯ ಜನರಿಗೂ ಒಳ್ಳೆಯದಾಗಲಿ. ರೋಗ ಬರುವುದನ್ನು ತಡೆಯುವುದಕ್ಕೆ ಮೊದಲ ಆದ್ಯತೆ ಎನ್ನುವ ಸೆಂಟ್ರಾಕೇರ್ ಆಸ್ಪತ್ರೆಯ ಧ್ಯೇಯ ಉತ್ತಮವಾಗಿದೆ. ಜನರು ಇದರ ಸದುಪಯೋಗಪಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಲಿ ಎಂದರು.
ನಾನಾ ಪಾಟೇಕರ ಮತ್ತು ಸಂಭಾಜಿ ಭಿಡೆ ಗುರೂಜಿ ನಿಸ್ವಾರ್ಥದಿಂದ ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದಾರೆ. ಡಾ.ಪ್ರಭಾಕರ ಕೋರೆ ಬೆಳಗಾವಿಯ ಹೆಸರು ಜಾಗತಿಕ ನೆಯಲ್ಲಿ ಮೂಡುವಂತೆ ಮಾಡಿದ್ದಾರೆ. ಅವರೆಲ್ಲ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಪ್ರಶಂಸಿಸಿದರು. ಶಾಸಕ ರಾಜು ಸೇಠ್, ಆಸ್ಪತ್ರೆ ವೈದ್ಯಕಿಯ ನಿರ್ದೇಶಕಿ ಡಾ.ನೀತಾ ದೇಶಪಾಂಡೆ, ಡಾ.ಅಮೃತಾ ಮಾತನಾಡಿದರು. ಶಿವಪ್ರತಿಷ್ಠಾನ ಹಿಂದುಸ್ತಾನ ಸಂಸ್ಥಾಪಕ ಸಂಭಾಜಿ ಭಿಡೆ ಗುರೂಜಿ, ಡಾ.ಅಮೃತಾ ರಾಠೆ, ರೋಹಿತ ದೇಶಪಾಂಡೆ, ದೀಪಕ ಕರಂಜಿಕರ ವೇದಿಕೆಯಲ್ಲಿದ್ದರು. ರೋಹಿತ ದೇಶಪಾಂಡೆ ವಂದಿಸಿದರು.