ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ

shirola
ಶಿರೋಳದ ಶ್ರೀ ಯಚ್ಚರಸ್ವಾಮಿ ಗವಿಮಠದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು.
Published on

ಶಿರೋಳ: ಮಕ್ಕಳಿಗಾಗಿ ಆಸ್ತಿ ಮಾಡದೇ ಅವರಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಶ್ರೀ ಅಭಿನವ ಯಚ್ಚರಸ್ವಾಮಿ ಹೇಳಿದರು. ಶಿರೋಳದ ಶ್ರೀಯಚ್ಚಸ್ವಾಮಿ ಗವಿಮಠದಲ್ಲಿ ಯಚ್ಚರಸ್ವಾಮಿಗಳ 187ನೇ ಆರಾಧನಾ ಮಹೋತ್ಸವ ಹಾಗೂ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ 56 ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಜರುಗಿದ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಕಿತ್ತಲಿಯ ಸಿದ್ಧರಾಮೇಶ್ವರ ಮಠದ ಮಂಜುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಮಹಾದೇವಿ ಸೊಬರದ, ತಾಪಂ ಮಾಜಿ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ಸಾಹಿತಿ ಗಣೇಶ ಹೊರಪೇಟೆ, ಯಚ್ಚರಪ್ಪ ಪತ್ತಾರ, ಬಾಪುಗೌಡ ತಿಮ್ಮನಗೌಡ್ರ, ಚನ್ನಬಸಪ್ಪ ನಾಶಿಪುಡಿ, ಎಸ್.ವೈ. ಮುಲ್ಕಿ ಪಾಟೀಲ, ಮೈಲಾರಪ್ಪ ಹಿರೇಮನಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net