ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ

SHIROL SWAMIJI
Published on

ಶಿರೋಳ: ಮಕ್ಕಳಿಗಾಗಿ ಆಸ್ತಿ ಮಾಡದೇ ಅವರಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಶಿರೋಳ ಶ್ರೀಅಭಿನವ ಯಚ್ಚರಸ್ವಾಮಿ ಹೇಳಿದರು.

ಶಿರೋಳದ ಶ್ರೀಯಚ್ಚಸ್ವಾಮಿ ಗವಿಮಠದಲ್ಲಿ ಯಚ್ಚರಸ್ವಾಮಿಗಳ ೧೮೭ನೇ ಆರಾಧನಾ ಮಹೋತ್ಸವ ಹಾಗೂ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ೫೬ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

`ಮಕ್ಕಳಲ್ಲಿರುವ ಮೊಬೈಲ್ ಗೀಳನ್ನು ಹೋಗಲಾಡಿಸಲು ಮೌಲ್ಯಯುತ ಶಿಕ್ಷಣ ನೀಡಬೇಕು. ಅದನ್ನು ಇಂದಿನ ಮಠಗಳು ನೀಡುತ್ತಿವೆ' ಎಂದರು.

ಕಿತ್ತಲಿಯ ಸಿದ್ಧರಾಮೇಶ್ವರ ಮಠದ ಮಂಜುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಗ್ರಾ.ಪಂ. ಅಧ್ಯಕ್ಷೆ ಮಹಾದೇವಿ ಸೊಬರದ, ತಾ.ಪಂ. ಮಾಜಿ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ಸಾಹಿತಿ ಗಣೇಶ ಹೊರಪೇಟೆ, ಯಚ್ಚರಪ್ಪ ಪತ್ತಾರ, ಬಾಪುಗೌಡ ತಿಮ್ಮನಗೌಡ್ರ, ಚನ್ನಬಸಪ್ಪ ನಾಶಿಪುಡಿ, ಎಸ್.ವೈ. ಮುಲ್ಕಿ ಪಾಟೀಲ, ಮೈಲಾರಪ್ಪ ಹಿರೇಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net