

ರಾಯಚೂರು ಸರ್ಕಾರ ಅಧೀನದಲ್ಲಿರುವ ಕೆಐಎಡಿಬಿ, ಕೆಎಸ್‌ಎಸ್‌ಐಡಿಸಿ ಮತ್ತು ಎಪಿಎಂಸಿ ಹೌಸಿಂಗ್ ಬೋರ್ಡ್‌ಗಳಿಂದ ಹಂಚಿಕೆಯಾಗುವ ನಿವೇಶನಗಳ ನೊಂದಣಿಗೆ ಇ-ಖಾತಾದಿಂದ ವಿನಾಯಿತಿ ನೀಡಬೇಕೆಂದು ಕಾಟನ್ ಮಿಲ್ಸರ್ ಅಸೋಸಿಯೇಷನ್‌ನ ಅಧ್ಯಕ್ಷ ವಿ.ಲಕ್ಷ್ಮೀರೆಡ್ಡಿ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಖಾಸಗಿ ಲೇಔಟ್ ,ನಿವೇಶಗಳ ನೊಂದಣಿಗೆ ಇ-ಖಾತಾ ಕಡ್ಡಾಯಗೊಳಿಸಿದೆ. ಆದರೆ ಉಪ ನೊಂದಣಿ ಕಚೇರಿ ಅಧಿಕಾರಿಗಳು ಸರ್ಕಾರದ ಅಧೀನ ಸಂಸ್ಥೆಗಳಿಗೂ ಇ-ಖಾತ ಸಲ್ಲಿಸಿದರೆ ಮಾತ್ರ ನೊಂದಣಿ ಮಾಡುವದಾಗಿ ಹೇಳುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಬರುವ ಆದಾಯದೊಂದಿಗೆ ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು ಅಡ್ಡಿಯಾಗುತ್ತಿದೆ. ಹಳೆದಾಗಿರುವ ನಿವೇಶನಗಳ ಮೂಲ ನಕ್ಷೆ ಇಲ್ಲದೇಇರುವದು ,
ಸಂಬಂಧಿಸಿ ಇಲಾಖೆಗಳಲ್ಲಿ ಅಧಿಕಾರಿಗಳೇ ಇಲ್ಲದೇ ಇರುವದರಿಂದ ಅಗತ್ಯ ನಕ್ಷೆ ಸೇರಿ ಇತರೆ ದಾಖಲೆ ಸಂಗ್ರಹಿಸಲು ಸಹ ಸಾಧ್ಯವಾಗುತ್ತಿಲ್ಲ. ಮಹಾನಗರ ಪಾಲಿಕೆ ಒಂದುವರ್ಷ ಕಾಲಾವಧಿ ನೀಡಿ ದಾಖಲೆ ನೀಡಲು ಅವಕಾಶ ನೀಡಬೇಕು. ನೊಂದಣಿ ವ ಅಗತ್ಯವಾಗಿರುವಪ್ರಮಾಣ ಪತ್ರ ನೀಡಬೇಕೆಂದರು ಒತ್ತಾಯಿಸಿದರು.