

ಹುಬ್ಬಳ್ಳಿ: ನಗರದ ಕುಸುಗಲ್ ರಸ್ತೆಯ ವೇದ ಇಂಟರ್ನ್ಯಾಷನಲ್ ಶಾಲೆಯ ಮೂರನೇ ವರ್ಷದ ವೇದಾಮೃತ ವಾರ್ಷಿಕೋತ್ಸವು ಇತ್ತೀಚೆಗೆ ಅದ್ದೂರಿಯಾಗಿ ಜರುಗಿತು.
ಉದ್ಯಮಿ ಮಹದೇವ ಕರಮರಿ ಉದ್ಘಾಟಿಸಿ ಮಾತನಾಡಿ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ ಮೈಲಿಗಲ್ಲು. ಶಿಕ್ಷಣ, ಸಂಸ್ಕಾರ ಮಕ್ಕಳಿಗೆ ನೀಡಬೇಕು. ಇವರು ದೇಶದ ಮುಂದಿನ ಭವಿಷ್ಯ ಎಂದರು.
ಶಾಲೆಯ ಮುಖ್ಯಸ್ಥ ಸಂಕಲ್ಪ ಶೆಟ್ಟರ್ ಮಾತನಾಡಿ, ಮಗುವಿಗೆ ಶಿಕ್ಷಣ ನೀಡುವ ಉದ್ದೇಶ ಮಾತ್ರವಲ್ಲ, ಸಮಾಜಕ್ಕೆ ಒಳ್ಳೆಯ ಪ್ರಜೆಯನ್ನಾಗಿಸುವ ಸಂಕಲ್ಪ ತೊಟ್ಟಿದ್ದೇವೆ. ಒಳ್ಳೆಯ ಗುಣ, ನಡತೆಯನ್ನು ವಿದ್ಯಾಭ್ಯಾಸದ ಜತೆಗೆ ಕಲಿಸುವ ಪ್ರಯತ್ನ ನಡೆದಿದೆ ಎಂದರು.
ಮಕ್ಕಳು ನೃತ್ಯ, ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟು ಬಹುಮಾನ ಮುಡಿಗೇರಿಸಿಕೊಂಡರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಶಿಲಾ ಶೆಟ್ಟರ್, ಶ್ರದ್ಧಾ ಶೆಟ್ಟರ್, ಇತರರು ಇದ್ದರು.