ಬರ ಪರಿಹಾರ, ಬೆಳೆವಿಮೆ ನೀಡಲು ಆಗ್ರಹ

IMG-20210412-WA0005_2024-06-26-08_31_42.jpg
Published on

ಹುಬ್ಬಳ್ಳಿ: ಕಳೆದ ವರ್ಷ ಉಂಟಾದ ಬರಗಾಲ ಹಿನ್ನೆಲೆಯಲ್ಲಿ ರೈತರಿಗೆ ಸಿಗಬೇಕಾದ ಪರಿಹಾರ ಇನ್ನೂ ಸಿಕ್ಕಿಲ್ಲ. ಅಲ್ಲದೇ ಕಷ್ಟಪಟ್ಟು ಪ್ರಿಮಿಯಂ ಪಾವತಿ ಮಾಡಿದ್ದರೂ ವಿಮೆ ಪರಿಹಾರವೂ ಮರೀಚಿಕೆಯಾಗಿದೆ. ಕೂಡಲೇ ಇವೆರಡನ್ನೂ ಒದಗಿಸಿ ಅನುಕೂಲ ಮಾಡಿಕೊಡಬೇಕೆಂದು ಎಪಿಎಂಸಿ ಮಾಜಿ ಅಧ್ಯಕ್ಷ ಸುರೇಶ ಕಿರೇಸೂರ ಆಗ್ರಹಿಸಿದ್ದಾರೆ.

ಬರಗಾಲ ಘೋಷಣೆಯಾಗಿದ್ದರೂ ಪರಿಹಾರ ಮಾತ್ರ ಇನ್ನೂ ತಲುಪಿಲ್ಲ. ಬರ ಪರಿಹಾರ ಹಣ ಬಿಡುಗಡೆಯಾಗಿದ್ದರೂ ಜಿಲ್ಲಾಡಳಿತಗಳು ಅದನ್ನು ಲಾನುಭವಿಗಳಿಗೆ ಸರಿಯಾಗಿ ತಲುಪಿಸಿಲ್ಲ.

ಅಕ್ಕಪಕ್ಕದ ಗದಗ ಸೇರಿ ಹಲವು ಜಿಲ್ಲೆಗಳಲ್ಲಿ ಹೆಚ್ಚಿನ ರೈತರು ಪರಿಹಾರ ಪಡೆದಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಮಾತ್ರ ಕೆಲವೇ ಜನರ ಖಾತೆಗಳಿಗೆ ಬರ ಪರಿಹಾರ ಜಮೆ ಆಗಿದೆ. ಈ ಬಗ್ಗೆ ಸರಿಯಾದ ಮಾಹಿತಿಯನ್ನೂ ಅಧಿಕಾರಿಗಳು ನೀಡುತ್ತಿಲ್ಲ ಎಂದು ಅವರು ದೂರಿದ್ದಾರೆ.

ಸದ್ಯ ಉತ್ತಮ ಮಳೆಯಾಗುತ್ತಿದೆ. ಬಿತ್ತನೆ ಮಾಡಬೇಕಾದರೆ ಹಣಕಾಸಿನ ಕೊರತೆ ಎದುರಾಗಿದೆ. ಅಲ್ಲಿಇಲ್ಲಿ ಸಾಲ ಮಾಡಿ ರೈತರು ಬಿತ್ತನೆ ಬೀಜ, ಗೊಬ್ಬರ ತಂದು ಬಿತ್ತನೆ ಮಾಡುತ್ತಿದ್ದಾರೆ. ಸರ್ಕಾರ ರೈತರಿಗೆ ಸಿಗಬೇಕಾದ ಪರಿಹಾರ ನೀಡಿದರೆ ಅವರಿಗೆ ಅನುಕೂಲವಾಗಲಿದೆ ಎಂದು ಕಿರೇಸೂರ ಮನವಿ ಮಾಡಿದ್ದಾರೆ.

ರೈತರಿಗೆ ಬಗ್ಗೆ ನಿಜವಾದ ಕಾಳಜಿ ಇದ್ದರೆ ಈ ಭಾಗದ ಜನಪ್ರತಿನಿಧಿಗಳು ಸಹ ಬರ ಹಾಗೂ ಬೆಳೆವಿಮೆ ಪರಿಹಾರ ಕೊಡಿಸಲು ಶ್ರಮಿಸಬೇಕು ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net