

ಮುಧೋಳ: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಕರಜಗಿ ಗ್ರಾಮದಲ್ಲಿ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿದ್ದನ್ನು ಖಂಡಿಸಿ ಅಂಜುಮನ್ ಸಮಿ ಒಕ್ಕೂಟ ಹಾಗೂ ಮುಸ್ಲಿಂ ಸಮುದಾಯದಿಂದ ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಕೆ.ಎಂ ಇಂಡಿಕರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಬಾಳಿ ಬದುಕಬೇಕಾಗಿದ್ದ ಪುಟ್ಟ ಬಾಲಕಿ ಕಾಮುಕನ ಅಟ್ಟಹಾಸಕ್ಕೆ ಸಾವನ್ನಪ್ಪಿದ್ದು, ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ದೇಶದಲ್ಲಿ ಇಂತಹ ಘಟನೆಗಳು ಪದೇ ಪದೆ ಮರುಕಳಿಸುತ್ತಿವೆ. ಹಂತಕರಿಗೆ ಗಲ್ಲು ಶಿಕ್ಷೆ ನೀಡುವ ಮೂಲಕ ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕು ಎಂದು ನ್ಯಾಯವಾದಿ ಐ.ಎಚ್. ಅಂಬಿ ಹಾಗೂ ಅಂಜುಮನ್ ಸಮಿತಿ ಅಧ್ಯಕ್ಷ ಆರ್ೀ ಮೋಮಿನ್ ಆಗ್ರಹಿಸಿದರು.
ಖಾಜಾ ಆಮೀನ ಬಾಗವಾನ, ನ್ಯಾಯವಾದಿ ಯಲ್ಲಪ್ಪ ಹೆಗಡೆ, ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಫೀಕ್ ಬೇಪಾರಿ, ಜಾವೀದ್ ಹವಾಲ್ದಾರ್, ಯುಸ್ು ಜಮಾದಾರ್, ಇಸ್ಮಾಯಿಲ್ ಮುರನಾಳ, ಶ್ರೀಕಾಂತ ಮ್ಯಾಗಾಡಿ, ರಿಯಾಜ್ ಖಾಲಿಕಾನ್, ಯುನುಸು ಕುಡುಚಿ, ಮಿರ್ಜಾ ನಾಯಕವಾಡಿ, ನಬಿ ಜಹಾಗೀರದಾರ, ಶರ್ೀ ಮುಲ್ಲಾ, ಜಲ್ ಮೋಮಿನ್ ಮತ್ತಿತರರಿದ್ದರು.