ಪಿಂಚಣಿದಾರರಿಗೆ ತುಟ್ಟಿಭತ್ಯೆ ನೀಡಿ

Give dearness allowance to pensioners
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ವಿಜಯಪುರದಲ್ಲಿ ಎನ್‌ಎಸಿ ಘಟಕದ ವತಿಯಿಂದ ಪ್ರತಿಭಟನೆ ನಡೆಸಿದರು. ವೀರಕುಮಾರ ಗಡಾದ, ಜಿ.ಎಸ್. ದೇಗಿನಾಳ, ಗುರುಭಟ್ಟ ಮತ್ತಿತರರಿದ್ದಾರೆ.
Published on

ವಿಜಯಪುರ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಗರದ ಕಾರ್ಮಿಕರ ಭವಿಷ್ಯ ನಿಧಿ ಕಚೇರಿ ಮುಂಭಾಗದಲ್ಲಿ ಗುರುವಾರ ಎನ್‌ಎಸಿ ಘಟಕದ ವತಿಯಿಂದ ನೂರಾರು ನಿವೃತ ನೌಕರರು ವೀರಕುಮಾರ ಗಡಾದ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಇಪಿಎಫ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

10-12 ವರ್ಷಗಳಿಂದ ಹೋರಾಟ ಮಾಡುತ್ತಿರುವ ದೇಶದ 78 ಲಕ್ಷ ಇಪಿಎಸ್-95 ಪಿಂಚಣಿದಾರರಿಗೆ ತುಟ್ಟಿ ಭತ್ಯೆ ನೀಡದೆ ಈ ಸೆಲ್ಫ್‌ಫಂಡೆಡ್ ಪೆನ್ಶನ್ ಯೋಜನೆಯಲ್ಲಿ ಪ್ರತಿ ತಿಂಗಳು ಸರಾಸರಿ 1,171 ರೂ. ಗಳ ಪಿಂಚಣಿಯನ್ನು ಭವಿಷ್ಯ ನಿಧಿ ಸಂಸ್ಥೆಯಿಂದ ನೀಡುತ್ತಿದೆ. ಕಾರ್ಮಿಕ 60ನೇ ವಯಸ್ಸಿಗೆ ನಿವೃತ್ತಿಯಾದಾಗ ಸರಾಸರಿ 1171 ರೂ. ಗಳ ನಿಶ್ಚಿತ ಪಿಂಚಣಿ ಪ್ರಾರಂಭವಾದರೆ ಅವನು 70-80 ವರ್ಷ ಬದುಕಿದ್ದಾಗಲೂ ಸರಾಸರಿ 1,171 ರೂ. ಗಳು ಮಾತ್ರ ಪಿಂಚಣಿ ನೀಡುವುದು ದೇಶದ ಯಾವ ಅದ್ಭುತ ಆರ್ಥಿಕ ತಜ್ಞನ ಜಾಣ್ಮೆಯ ಯೋಜನೆಯಾಗಿದೆಯೋ ಎಂದು ಭವಿಷ್ಯ ನಿಧಿಯ 7 ಕೋಟಿಯಷ್ಟು ಚಂದಾದಾರರಿಗೂ ತಿಳಿಯದ ಕಬ್ಬಿಣದ ಕಡಲೆಯಾಗಿದೆ ಎಂದು ದೂರಿದರು.

ಪ್ರತಿ ಆರು ತಿಂಗಳಿಗೊಮ್ಮೆ ದೇಶದ ಪ್ರೈಸ್ ಇಂಡೆಕ್ಸ್ ಪ್ರಕಾರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತನ್ನ ನೌಕರನಿಗೆ ಸೇವೆಯಲ್ಲಿದಾಗಲೂ ಹಾಗೂ ನಿವೃತ್ತಿಯಾಗಿ ಪಿಂಚಣಿ ಪಡೆಯುವಾಗಲೂ ತುಟ್ಟಿಭತ್ಯೆ ಹೆಚ್ಚಳ ಮಾಡುವುದಿಲ್ಲವೇ? ಅವರಷ್ಟೇ ಮಾರುಕಟ್ಟೆ ಬೆಲೆ ಏರಿಕೆಗೆ ಹಣದ ಮುಗ್ಗಟ್ಟು ಎದುರಿಸುತ್ತಾರೆಯೇ? ಎಂಬುದೂ ಸೇರಿ ಮತ್ತಿತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

ಎನ್‌ಎಸಿ ಉಪಾಧ್ಯಕ್ಷ ವೀರಕುಮಾರ ಗಡಾದ, ಸಂಚಾಲಕ ಜಿ.ಎಸ್. ದೇಗಿನಾಳ, ಜಂಟಿ ಕಾರ್ಯದರ್ಶಿ ಗುರುಭಟ್ಟ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net