ಬ್ರಾಹ್ಮಣ ಸಮುದಾಯಕ್ಕೆ ಡಿಸಿಎಂ ಹುದ್ದೆ ನೀಡಿ

pressmeet
ವಿಜಯಪುರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬ್ರಾಹ್ಮಣ ಸಮುದಾಯದ ಮುಖಂಡ ರಾಘವೇಂದ್ರ ಆಲಗೂರ ಮಾತನಾಡಿದರು. ಮುಖಂಡರಾದ ಗುಂಡು ಕುಲಕರ್ಣಿ, ರಜನಿಕಾಂತ ಕುಲಕರ್ಣಿ, ಶರತ್ ಕುಲಕರ್ಣಿ ಇದ್ದರು.
Published on

ವಿಜಯಪುರ: ಸಜ್ಜನ ರಾಜಕಾರಣಿ, ಒಂಬತ್ತು ಬಾರಿ ಶಾಸಕರಾಗಿರುವ ಆರ್.ವಿ. ದೇಶಪಾಂಡೆ ಅಥವಾ ಕೆಪಿಸಿಸಿ ಅಧ್ಯಕ್ಷರಾಗಿದ್ದ ದಿನೇಶ ಗುಂಡೂರಾವ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಬ್ರಾಹ್ಮಣ ಸಮುದಾಯದ ಮುಖಂಡ ರಾಘವೇಂದ್ರ ಆಲಗೂರ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್.ವಿ. ದೇಶಪಾಂಡೆ ನಿಷ್ಠಾವಂತ ಕಾಂಗ್ರೆಸ್ ನಾಯಕ. ಸಜ್ಜನ ರಾಜಕಾರಣಿ, ಅಪಾರ ಅನುಭವವುಳ್ಳ ದೇಶಪಾಂಡೆ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದರು.

ಬ್ರಾಹ್ಮಣ ಸಮಾಜದ ಪ್ರಗತಿಗಾಗಿ ರಚನೆ ಮಾಡಲಾಗಿರುವ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸೇರಿ ವಿವಿಧ ಪ್ರಾಧಿಕಾರ, ನಿಗಮಗಳಲ್ಲಿ ಉತ್ತರ ಕರ್ನಾಟಕ ಭಾಗದ ಬ್ರಾಹ್ಮಣ ಮುಖಂಡರನ್ನು ನೇಮಕ ಮಾಡಬೇಕು. ಆಗ ಉತ್ತರ ಕರ್ನಾಟಕ ಭಾಗದ ಬ್ರಾಹ್ಮಣರ ಪ್ರಗತಿ ಸಾಧ್ಯವಾಗುತ್ತದೆ ಎಂದರು.

ಬ್ರಾಹ್ಮಣ ಸಮಾಜದ ಯುವ ಮುಖಂಡ ಸಂತೋಷ ದೇಶಪಾಂಡೆ ಮಾತನಾಡಿ, ಕಾಂಗ್ರೆಸ್ ಪಕ್ಷ ಬಹುಮತದಿಂದ ಸರ್ಕಾರ ರಚನೆ ಮಾಡಿದ್ದು, ಪಕ್ಷ ಸಂಘಟನೆಯಲ್ಲಿ ಅನೇಕ ದಶಕಗಳಿಂದ ಸಕ್ರಿಯವಾಗಿ ದುಡಿದಿರುವ ಹಿರಿಯ ಹಾಗೂ ಸಜ್ಜನ ರಾಜಕಾರಣಿ ಆರ್.ವಿ. ದೇಶಪಾಂಡೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಸೇರಿ ಹಲವಾರು ಉನ್ನತ ಹುದ್ದೆ ನಿಭಾಯಿಸಿದ್ದಾರೆ. ಹೀಗಾಗಿ ಅವರನ್ನು ಅಥವಾ ದಿನೇಶ ಗುಂಡೂರಾವ್ ಅವರಿಗೆ ಉಪಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಬೇಕು ಎಂದರು.

ಮುಖಂಡರಾದ ಗುಂಡು ಕುಲಕರ್ಣಿ, ರಜನಿಕಾಂತ ಕುಲಕರ್ಣಿ, ಶರತ್ ಕುಲಕರ್ಣಿ, ಮಾಣಿಕ ಕುಲಕರ್ಣಿ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net