

ಹುಬ್ಬಳ್ಳಿ: ನಿಗಮ -ಮಂಡಳಿ ನೇಮಕದ ವೇಳೆ ಕಾರ್ಯಕರ್ತರಿಗೆ ಮೊದಲ ಆದ್ಯತೆ ನೀಡಬೇಕೆಂದು ಧಾರವಾಡ ಜಿಲ್ಲಾ ಜಯ ಭಾರತ ಜನ ಸೇವಾ ಸಂಘ, ಕಾಂಗ್ರೆಸ್ ಸರ್ಕಾರವನ್ನು ಆಗ್ರಹಿಸಿದೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಐ.ಎಂ. ತೋರಗಲ್ಲ, ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರ ಪಾತ್ರ ಹಿರಿದು. ಹಿರಿಯರು ಈಗಾಗಲೇ ಶಾಸಕರು, ಸಚಿವರಾಗಿದ್ದಾರೆ. ಅವರನ್ನು ನಿಗಮ -ಮಂಡಳಿಗೆ ನೇಮಕ ಮಾಡುವುದರಿಂದ ಫಲವಿಲ್ಲ. ಕಾರ್ಯಕರ್ತರಿಗೆ ಅವಕಾಶ ಕೊಟ್ಟರೆ ಲೋಕಸಭೆ ಚುನಾವಣೆ ವೇಳೆ ಇನ್ನಷ್ಟು ಲಾಭ ಅಗಲಿದೆ ಎಂದರು.
ಪ್ರಮುಖರಾದ ಶ್ರೀಕಂಠಯ್ಯ ನಾವಳ್ಳಿಮಠ, ಆರ್.ಐ. ಹಿರೇಮಠ, ಶಹಾಬುದ್ದೀನ್ ಮುಲ್ಲಾ, ಕೆ.ಕೆ. ಮುಲ್ಲಾ ಇತರರು ಸುದ್ದಿಗೋಷ್ಠಿಯಲ್ಲಿದ್ದರು.