

ಗಜೇಂದ್ರಗಡ: ರೈತರ ಪಂಪ್‌ಸೆಟ್‌ಗಳಿಗೆ ನಿರಂತರವಾಗಿ 7 ಗಂಟೆ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ತಾಲೂಕಿನ ರಾಜೂರು, ದಿಂಡೂರ, ಕಾಲಕಾಲೇಶ್ವರ ಗ್ರಾಮದ ರೈತರು ಹೆಸ್ಕಾಂ ಅಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿದರು.
20 ದಿನಗಳಿಂದ ಮಳೆಯಾಗದೇ ಬೆಳೆಗಳು ಒಣಗುತ್ತಿವೆ. 2 ವಾರಗಳಿಂದ 3-4 ತಾಸು ಮಾತ್ರ ವಿದ್ಯುತ್ ನೀಡುತ್ತಿರುವುದರಿಂದ ತುಂಬಾ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ರಾಜಾಭಕ್ಷಿ ನದಾಫ, ಶಿವಪ್ಪ ರಾಠೋಡ, ಗಂಗಪ್ಪ ಗುಲಗುಳಿ, ಲಕ್ಷ್ಮಣ ರಾಠೋಡ, ಮುತ್ತಪ್ಪ ಹಾದಿಮನಿ, ರಮೇಶ ಗುಳ್ಳಿ, ಮಲ್ಲಪ್ಪ ಹಾದಿಮನಿ, ಶಂಕ್ರಪ್ಪ ರಾಠೋಡ, ಪರಸಪ್ಪ ರಾಠೋಡ, ಬಸಪ್ಪ ಆಡಿನ, ಮುತ್ತಪ್ಪ ರಾಠೋಡ, ದಾವಲಸಾಬ ಮುಜಾವರ, ಮಹಮ್ಮದ ರಫಿ ಮುಜಾವರ, ಲಿಂಗರಾಜ ಮೂಗನೂರ, ರಮೇಶ ರಾಠೋಡ, ಮಲ್ಲಪ್ಪ ಗುಳಗುಳಿ ಇತರರು ಇದ್ದರು.