ಮಕ್ಕಳಿಗೆ ಸಮತೋಲಿತ ಆಹಾರ ನೀಡಿ

25 ALVANDI 02
ಅಳವಂಡಿ ಅಂಗನವಾಡಿಯಲ್ಲಿ ಪೋಷಕರ ನಡೆ ಅಂಗನವಾಡಿ ಕಡೆ ಕಾರ್ಯಕ್ರಮ ನಡೆಯಿತು.ಅಂಗನವಾಡಿ ಸಹಾಯಕಿ ವಿಜಯಲಕ್ಷ್ಮೀ, ಪಾಲಕರಾದ ಶಿವಲೀಲಾ, ದ್ರಾಕ್ಷಾಯಣಿ, ತಬಸುಮ್ಮ, ಖಾದರಬೀ, ಜೈಬುನಾ, ಮಾಬೂಬಿ, ತಾಹೇರಾ, ಸುಶೀಲವ್ವ, ಅನಿತಾ, ನೇತ್ರಾ, ಪ್ರಿಯಾಂಕಾ, ಸನಾಬೇಗಂ, ಅಂಜುಮಾ, ಕೌಸರ್, ಉಮಾ, ಪೂಜಾ ಇತರರಿದ್ದರು.
Published on

ಮಕ್ಕಳಿಗೆ, ಸಮತೋಲಿತ, ಆಹಾರ, ನೀಡಿ, Give, children, balanced, diet,

ಅಳವಂಡಿ: ದಿನದ ಕೆಲ ಸಮಯವನ್ನು ಮಕ್ಕಳೊಂದಿಗೆ ವಿವಿಧ ಚಟುವಟಿಕೆ ಕೈಗೊಳ್ಳುವುದರಿಂದ ಮಕ್ಕಳ ಮನಸ್ಸು ಚುರುಕುಗೊಳ್ಳಲಿದೆ ಎಂದು ಅಂಗನವಾಡಿ ಕಾರ್ಯಕರ್ತೆ ಮರಿಬಸಮ್ಮ ತಿಳಿಸಿದರು. ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಪೋಷಕರ ನಡೆ ಅಂಗನವಾಡಿ ಕಡೆ ಕಾರ್ಯಕ್ರಮದಲ್ಲಿ ಪಾಲಕರನ್ನು ಉದ್ದೇಶಿಸಿ ಸೋಮವಾರ ಮಾತನಾಡಿದರು. ನಂತರ ಪಾಲಕರು ಮಕ್ಕಳೊಂದಿಗೆ ವಿವಿಧ ಚಿತ್ರಗಳನ್ನು ಬಿಡಿಸುವುದು ಹಾಗೂ ವಿವಿಧ ಚಟುವಟಿಕೆಯಲ್ಲಿ ಪಾಲ್ಗೊಂಡರು. ಮಕ್ಕಳು ಆರೋಗ್ಯವಂತರಾಗಿರಲು ಸಮತೋಲಿನ ಆಹಾರ ನೀಡಬೇಕು. ಇದು ಅವರನ್ನು ಸದೃಢವಾಗಿರಿಸುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net