ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಿ

ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ, ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ, ನಿವೃತ್ತಿ ಹೊಂದಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಭಾರತ ರತ್ನ ಸರ್ವೆಪಲ್ಲಿ ರಾಧಾಕೃಷ್ಣನ್​ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
Makkalige Moulyayuta Shikshana Needi
Published on


ಶಿಕ್ಷಕರಿಗೆ ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ.ಸುಧಾಕರ್​ ಸಲಹೆ

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಶಿಕ್ಷಕರು ಎಲ್ಲವೂ ಗೊತ್ತಿದೆ ಎಂಬ ಭಾವನೆಯಲ್ಲಿರುವುದು ಸರಿಯಲ್ಲ. ನಿರಂತರವಾಗಿ ಅಧ್ಯಯನದ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿರ್ವಹಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್​ ಸಲಹೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಂಗಳವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಬದಲಾದ ಬೆಳವಣಿಗೆಯಲ್ಲಿ ಅಶಾಂತಿ, ಭಾವೈಕ್ಯತೆಗೆ ಧಕ್ಕೆಯ ವಾತಾವರಣ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಲ್ಲಿ ಸಾಮರಸ್ಯ, ಬದ್ಧತೆಯನ್ನು ಕಾಪಾಡುವಂತಹ ಮನೋಭಾವನೆಯನ್ನು ಮೈಗೂಢಿಸಿಕೊಳ್ಳುವಂತಹ ಮೌಲ್ಯಯುತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ತಿಳಿಸಿದರು.
ತತ್ವಶಾಸ ಸರ್ವೆಪಲ್ಲಿ ರಾಧಾಕೃಷ್ಣನ್​ ಅವಂತಹ ಮಹನೀಯರ ಸಾಧನೆಯ ಬಗ್ಗೆ ಮಕ್ಕಳಿಗೆ ನಿರಂತರವಾಗಿ ಸ್ಫೂರ್ತಿಯನ್ನು ತುಂಬೇಕು. ಶಿಕ್ಷಣದಲ್ಲಿ ಕೇವಲ ಅಂಕಗಳಿಕೆಯೇ ಮುಖ್ಯವಲ್ಲ. ಇದು ಮೌಲ್ಯವನ್ನು ಹೊಂದಿರಬೇಕು. ಕೌಶಲ ವೃದ್ಧಿಯೊಂದಿಗೆ ಉದ್ಯೋಗವನ್ನು ಪಡೆಯುವ ಸಾಮರ್ಥ್ಯವನ್ನು ಬೆಳೆಸಬೇಕು ಎಂದರು.
ಜಾಗತಿ ಪೈಪೋಟಿಯ ಯುಗದಲ್ಲಿ ಇಂಗ್ಲಿಷ್​ ಮಾಧ್ಯಮವನ್ನು ಕಡೆಗಣಿಸುವಂತಿಲ್ಲ. ಮಾತೃ ಭಾಷೆಗೆ ಒತ್ತು ನೀಡಿ ಇತರ ಭಾಷೆಗಳನ್ನು ಕಲಿಯಬೇಕಾಗಿದೆ. ಇಂದು ಶೈಕ್ಷಣಿಕವಾಗಿ ದೊಡ್ಡ ಮಟ್ಟದ ಸಾಧನೆಗಳಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಇದು ಮಹಿಳಾ ಸಬಲೀಕರಣಕ್ಕೆ ಸಹಾಯಕವಾಗಿದೆ ಎಂದರು.
ಶಾಸಕ ಪ್ರಧಿಪ್​ ಈಶ್ವರ್​ ಮಾತನಾಡಿ, ಶಿಕ್ಷಕರು ದೀರ್ ಕಾಲಿಕವಾಗಿ ದುಡಿಯುತ್ತ ತಮ್ಮ ಆರೋಗ್ಯದ ಕಡೆ ರ್ನಿಲಕ್ಷ ವಹಿಸಬಾರದು. ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಗಮನಹರಿಸಬೇಕು. ತಾವು ದುಡಿದ ಹಣವನ್ನು ಒಂದಷ್ಟು ಉಳಿಸಿ ನಿವೃತ್ತಿ ನಂತರದ ಬದುಕಿಗೆ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಪಿ.ಎನ್​.ರವೀಂದ್ರ, ಜಿಪಂ ಸಿಇಒ ಪ್ರಕಾಶ್​ ಜಿ.ಟಿ.ನಿಟ್ಟಾಲಿ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಿ.ಎಲ್​.ನಾಗೇಶ್​, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಬೈಲಾಂಜಿನಪ್ಪ, ಮುನಿಕೆಂಪೇಗೌಡ, ಪ್ರೌಢಶಾಲಾ ಸಹ ಶಿಕ್ಷಕರ ಸಂದ ಜಿಲ್ಲಾಧ್ಯಕ್ಷ ಟಿ.ಶಶಿಧರ್​, ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ಅಧ್ಯಕ್ಷ ಎ.ನಾರಾಯಣಸ್ವಾಮಿ ಮತ್ತಿತರರು ಇದ್ದರು.

ಶಿಕ್ಷಕರೇ ಪೊರಕೆ ಹಿಡಿಯಿರಿ
ಶಾಲೆಗಳಲ್ಲಿ ಶಿಕ್ಷಕರು ಪೊರಕೆ, ಬಕೆಟ್​ ತೆಗೆದುಕೊಂಡು ಮಕ್ಕಳೊಂದಿಗೆ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಬೇಕು. ಇದರ ಮೂಲಕ ಮಕ್ಕಳಲ್ಲಿ ನಿರ್ವಹಣೆಯ ಪ್ರೆಯನ್ನು ಬೆಳೆಸಬೇಕು ಎಂದು ಸಚಿವರು ಸಲಹೆ ನೀಡಿದರು. ಮಕ್ಕಳಿಂದ ಶಾಲೆಗಳಲ್ಲಿ ಸ್ವಚ್ಛತಾ ಕೆಲಸ ಮಾಡಿಸಿದಾಗ ವಿರೋಧ ವ್ಯಕ್ತವಾಗುತ್ತದೆ. ಆದರೆ, ಶಿಕ್ಷಕರು ಸಹ ಅವರ ಜತೆಯಲ್ಲಿ ಖುದ್ದು ತೊಡಗಿಸಿಕೊಂಡಾಗ ಸ್ವಚ್ಛತೆಯ ಬಗ್ಗೆ ಪಾಠ ಕಲಿಸಿದಂತಾಗುತ್ತದೆ ಎಂದರು. ಎಲ್ಲ ಕೆಲಸಗಳಿಗಿಂತಲೂ ಶಿಕ್ಷಕರ ವೃತ್ತಿಗೆ ಸಮಾಜದಲ್ಲಿ ಅಪಾರವಾದ ಗೌರವವಿದೆ. ಆ ಗೌರವ, ವೃತ್ತಿ ಧರ್ಮ, ಗುರು ಸಂಹಿತೆ ಪಾಲಿಸಬೇಕು. ಇತರ ವ್ಯವಹಾರಗಳಲ್ಲಿ ತೊಡಗಿಸಿಕೊಂಡು, ಬೇರೆ ಕಡೆ ಗಮನಹರಿಸುವಿಕೆಯು ಶೈಕ್ಷಣಿಕ ೇತ್ರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಮಾರ್ಮಿಕವಾಗಿ ತಿಳಿಸಿದರು.

ಬ್ರಿಟಿಷರಿಗೆ ಹ್ಯಾಟ್ಸ್​ ಆಫ್​ ಹೇಳಬೇಕು
ಭಾರತದಲ್ಲಿ ಮೊದಲು ಶೇ.3ರಷ್ಟು ಜನರಿಗೆ ಮಾತ್ರ ವಿದ್ಯಾಭ್ಯಾಸ ಮೀಸಲಾಗಿತ್ತು. ಬ್ರಿಟಿಷರು ಬಂದ ಬಳಿಕ ಶೋಷಿತರು, ಹೆಣ್ಣು ಮಕ್ಕಳು ಭೇದಭಾವವಿಲ್ಲದೇ ಎಲ್ಲ ವರ್ಗದ ಜನರಿಗೂ ಶಿಕ್ಷಣ ಸಿಗುವಂತಾಯಿತು. ಇದಕ್ಕೆ ಅವರಿಗೆ ಹ್ಯಾಟ್ಸ್​ ಆಫ್​ ಹೇಳಬೇಕು. ಸ್ವಾತಂತ್ರ$್ಯ ಪಡೆದ ಸಂದರ್ಭದಲ್ಲಿ ಶೇ.11ರಷ್ಟಿದ್ದ ಸಾಕ್ಷರತೆಯ ಪ್ರಮಾಣವು ಇದೀಗ ಶೇ.83ರಷ್ಟು ಸಾಧನೆಗೆ ಬಂದಿದೆ. ಕಳೆದ 75 ವರ್ಷದಲ್ಲಿ ಏನು ಸಾಧನೆಯಾಗಿದೆ ಎಂಬುದಾಗಿ ಕೇಳುವವರಿಗೆ ಮಹಿಳಾ ಸಬಲೀಕರಣ, ಶೈಕ್ಷಣಿಕ ಪ್ರಗತಿಯೇ ಉತ್ತರವಾಗಿದೆ ಎಂದು ಪ್ರಧಾನ ಭಾಷಣಕಾರ ಪೊ ಕೋಡಿರಂಗಪ್ಪ ತಿಳಿಸಿದರು.
ಭಾಗಶ@ ಬದಲಿಗೆ ಪೂರ್ಣ ಪ್ರಮಾಣದ ಶಿಕ್ಷಕರಾಗಬೇಕು. ಮಕ್ಕಳಲ್ಲಿ ಸಾಮಾಜಿಕ ಬದ್ಧತೆ, ಉತ್ತಮ ವ್ಯಕ್ತಿತ್ವವನ್ನು ಬೆಳೆಸಬೇಕು. ಇದಕ್ಕೆ ಮೊದಲ ಹೆಜ್ಜೆಯಾಗಿ ಖಾಸಗಿ ಶಾಲೆಗಳ ಬದಲಿಗೆ ಹೆತ್ತ ಮಕ್ಕಳನ್ನು ಸ್ವಯಂ ಪಾಠ ಪ್ರವಚನ ನೀಡುವ ಸರ್ಕಾರಿ ಶಾಲೆಗಳಲ್ಲಿ ದಾಖಲಿಸುವ ವಿಚಾರದಲ್ಲಿ ಶಿಕ್ಷಕರು ಹೃದಯ ವೈಶಾಲ್ಯವನ್ನು ಮೆರೆಯಬೇಕು ಎಂದು ಸಲಹೆ ನೀಡಿದರು.

ಶಿಕ್ಷಕರ ಸಂದ ಮನವಿ
ಸರ್ಕಾರಿ ಪ್ರಾಥಮಿಕ ಶಾಲಾ, ಪ್ರೌಢಶಾಲಾ ಶಿಕ್ಷಕರು, ಬಡ್ತಿ ಶಿಕ್ಷಕರು ವಿವಿಧ ಬೇಡಿಕೆ ಈಡೇರಿಕೆಗೆ ಸಚಿವರಿಗೆ ಮನವಿ ಸಲ್ಲಿಸಿದರು. ಸೇವಾ ವೃಂದ ನೇಮಕಾತಿ, ಬಡ್ತಿ, ವೇತನ ತಾರತಮ್ಯ ಸೇರಿದಂತೆ ಅವೈಜ್ಞಾನಿಕ ನಿಯಮಗಳನ್ನು ಪರಿಷ್ಕರಿಸಬೇಕು. ಜಿಲ್ಲಾ ಕೇಂದ್ರದಲ್ಲಿ ನಿರ್ಮಿಸುತ್ತಿರುವ ಗುರು ಭವನಕ್ಕೆ ಹೆಚ್ಚುವರಿ ಅನುದಾನವನ್ನು ಒದಗಿಸಿ, ತ್ವರಿತವಾಗಿ ಉದ್ಘಾಟಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net