

ಭದ್ರಾವತಿ: ಯೋಧರೊಬ್ಬರಿಗೆ ಸೇರಿದ ಜಾಗವನ್ನು ನಗರಸಭೆ ಸದಸ್ಯರೊಬ್ಬರು ಅಕ್ರಮವಾಗಿ ಕಬಳಿಕೆ ಮಾಡಿದ್ದು ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಆಗ್ರಹಿಸಿ ಸಾರ್ವಜನಿಕ ಕುಂದು ಕೊರತೆ ಹೋರಾಟ ಸಮಿತಿಯಿಂದ ನಗರಸಭೆ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.
ನಗರಸಭೆ ವ್ಯಾಪ್ತಿಯ ನಿವೇಶನವು ವೀರ ಯೋಧ ಗುರುವಯ್ಯ ಅವರದಾಗಿದ್ದು ಅದಕ್ಕೆ ಸಂಬAಽಸಿದ ಹಕ್ಕುಪತ್ರ ದಾಖಲೆಗಳು ಸಹ ಇವೆ. ಆದರೆ ಬೋಗಸ್ ಹಕ್ಕುಪತ್ರಗಳನ್ನು ಸೃಷ್ಟಿಸಿ ಭೂ ಕಬಳಿಕೆಗೆ ಮುಂದಾಗಿದ್ದಾರೆ. ಈ ಸಂಬAಧ ಪ್ರಕರಣ ನ್ಯಾಯಾಲಯದಲ್ಲಿದೆ. ನ್ಯಾಯಾಲಯ ಈ ಜಾಗವನ್ನು ಗುರುವಯ್ಯ ಅವರಿಗೆ ಬಿಡಿಸಿ ಕೊಡುವಂತೆ ಆದೇಶಿಸಿದ್ದರೂ ಆದೇಶವನ್ನು ಲೆಕ್ಕಿಸದೆ ಯೋಧರ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ. ಕೂಡಲೆ ನಗರಸಭೆ ಅಽಕಾರಿಗಳು ಜಾಗದ ಸರ್ವೇ ನಡೆಸಿ ಗುರುವಯ್ಯ ಅವರ ಜಾಗವನ್ನು ಗುರುತಿಸಿಕೊಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮಾತನಾಡಿದ ಪೌರಾಯುಕ್ತ ಮನುಕುಮಾರ್, ನಗರಸಭೆ ಅಧ್ಯಕ್ಷೆ ಶ್ರುತಿ ವಸಂತಕುಮಾರ್ ಉಪಾಧ್ಯಕ್ಷೆ ಸರ್ವಮಂಗಳಾ ಭೈರಪ್ಪ, ಸದಸ್ಯ ಚನ್ನಪ್ಪ, ಸ್ಥಳ ಪರಿಶೀಲನೆ ನಡೆಸಿ ನಿವೇಶನವನ್ನು ಗುರುತಿಸಿಕೊಡಲಾಗುವುದು. ಆ ನಂತರ ನ್ಯಾಯಾಲಯದ ಆದೇಶಕ್ಕೆ ಬದ್ಧರಾಗಿರುತ್ತೇವೆ. ಸದ್ಯಕ್ಕೆ ನಿಮ್ಮ ಹೋರಾಟ ಸ್ಥಗಿತಗೊಳಿಸಿ ಎಂದು ಹೋರಾಟಗಾರರಲ್ಲಿ ಮನವಿ ಮಾಡಿದರು.
ಡಿಎಸ್‌ಎಸ್ ರಾಜ್ಯ ಸಂಚಾಲಕ ಭದ್ರಾವತಿ ಸತ್ಯ, ಜಿಲ್ಲಾ ಸಂಚಾಲಕ ಚಿನ್ನಯ್ಯ, ಸುರೇಶ್, ಬಾಲಕೃಷ್ಣ, ಅನಿಲ್, ಜಗದೀಶ್, ಚನ್ನಪ್ಪ, ಕಾಣಿಕ್‌ರಾಜ್, ಈಶ್ವರಪ್ಪ ಸೇರಿ ಇತರರಿದ್ದರು.