ಎಲ್ಲ ರೋಗಿಗಳಿಗೂ ಸೂಕ್ತ ಚಿಕಿತ್ಸೆ ನೀಡಿ

KDR doctor
ಕಡೂರು ಆಸ್ಪತ್ರೆಯ ರಕ್ತಪರೀಕ್ಷೆ ಪ್ರಯೋಗಾಲಯದಲ್ಲಿ ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅನಿಲ್‌ಕುಮಾರ್ ಪರಿಶೀಲಿಸಿದರು. ಡಾ. ಗೋಪಾಲಕೃಷ್ಣ, ಡಾ. ಅಶ್ವತ್ಥ್‌ಬಾಬು, ಡಾ. ಎಸ್.ಎನ್.ಉಮೇಶ್ ಇತರರಿದ್ದರು.
Published on

ಕಡೂರು: ರೋಗಿಗಳಿಗೆ ಯಾವುದೇ ಸೌಲಭ್ಯ ಕೊರತೆಯಾಗದಂತೆ ಒದಗಿಸಬೇಕು ಎಂದು ಆರೋಗ್ಯ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಅನಿಲ್‌ಕುಮಾರ್ ಸೂಚಿಸಿದರು.

ತಾಲೂಕು ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿ ಮಾತನಾಡಿ, ಪ್ರಸೂತಿ ತಜ್ಞರನ್ನು ನೇಮಿಸಲಾಗಿದೆ. ಹೆರಿಗೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗುವುದನ್ನು ತಪ್ಪಿಸಬೇಕು. ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ರೋಗಿಗಳಿಗೆ ಹೆಚ್ಚಿನ ಸೌಲಭ್ಯ ನೀಡಬೇಕು. ಏನೇ ಕುಂದುಕೊರತೆಯಿದ್ದರೂ ಕೂಡಲೇ ವರದಿ ಕಳುಹಿಸಿದರೆ ಪರಿಹರಿಸಲಾಗುವುದು ಎಂದು ಹೇಳಿದರು.
ಹೊರರೋಗಿ ವಿಭಾಗ, ರಕ್ತ ಪರೀಕ್ಷೆ ಪ್ರಯೋಗಾಲಯ, ಡಯಾಲಿಸಿಸ್ ಘಟಕ ಮತ್ತು ತುರ್ತು ನಿಗಾಘಟಕಕ್ಕೆ ಭೇಟಿ ನೀಡಿದರು.
ಆಸ್ಪತ್ರೆ ಆಡಳಿತ ವೆದ್ಯಾಧಿಕಾರಿ ಡಾ. ಎಸ್.ಎನ್.ಉಮೇಶ್ ಮಾತನಾಡಿ, ಡಿ ಗ್ರೂಪ್ ನೌಕರರ 38 ಮಂಜೂರಾತಿ ಹುದ್ದೆಗಳಿದ್ದು, ಒಂದು ಹುದ್ದೆ ಮಾತ್ರ ಭರ್ತಿಯಾಗಿದೆ. ಸರ್ಕಾರದ ನಿಯಮದಂತೆ ಶೇ.75 ಹುದ್ದೆಗಳಲ್ಲಿ ಹೊರಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಸಮರ್ಪಕವಾಗಿ ಔಷಧ ದಾಸ್ತಾನು ಇದ್ದು, ಎಲ್ಲ ವಿಭಾಗಗಳನ್ನೂ ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಿಪಂ ಸಿಇಒ ಡಾ. ಗೋಪಾಲಕೃಷ್ಣ, ಡಿಎಚ್‌ಒ ಡಾ. ಅಶ್ವತ್ಥ್‌ಬಾಬು ಹಾಗೂ ವೈದ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net