

ಶಿಕಾರಿಪುರ: ಸತತ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿ ಮೆಕ್ಕೆಜೋಳ ಬೆಳೆ ಹಾಳಾಗಿದ್ದು, ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರೈತ ಸಂಘದ ಜಿಲ್ಲಾ ಮತ್ತು ತಾಲೂಕು ಘಟಕದ ಪದಾಽಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ಜೂನ್ ತಿಂಗಳಲ್ಲಿ ಮಳೆ ಬಾರದೆ ಕೊನೆಯ ವಾರದಲ್ಲಿ ಜಿಟಿಜಿಟಿ ಮಳೆಗೆ ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಆನಂತರ ಸತತ ಮಳೆಯಾಗಿದ್ದರಿಂದ ಮೆಕ್ಕೆಜೋಳ ಬೆಳೆದ ಪ್ರದೇಶ ಜೌಗು ಹಿಡಿದು ಕಳೆತುಂಬಿ ಹಾಳಾಗಿವೆ. ಹಾಗಾಗಿ ಕೂಡಲೇ ಪರಿಹಾರ ವಿತರಿಸಬೇಕು ಎಂದು ಜಿಲ್ಲಾ ರೈತ ಸಂಘದ ಗೌರವಾಧ್ಯಕ್ಷ ಪ್ಯಾಟಿ ಈರಣ್ಣ ಒತ್ತಾಯಿಸಿದರು.
ತಾಳಗುಂದ, ಹೊಸೂರು ಸೇರಿ ಬಹುತೇಕ ಎಲ್ಲ ಹೋಬಳಿಗಳಲ್ಲಿ ಉತ್ತಮ ಮಳೆಯಾಗಿದೆ. ಇದರಿಂದಾಗಿ ಮೆಕ್ಕೆಜೋಳ ಜೌಗಿನಿಂದ ಹಾಳಾಗಿವೆ. ಅಽಕಾರಿಗಳು ತಕ್ಷಣ ಸಮೀಕ್ಷೆ ನಡೆಸಿ ಸರ್ಕಾರದಿಂದ ಪರಿಹಾರವನ್ನು ಕೊಡಿಸಬೇಕು. ಸರ್ಕಾರ ಈ ನಷ್ಟವನ್ನು ಭರಿಸಿ ರೈತರಿಗೆ ನೆರವಾಗಬೇಕು ಎಂದು ಆಗ್ರಹಿಸಿದರು.
ಜಿ¯್ಲÁ ಕಾರ್ಯಾಧ್ಯಕ್ಷ ದೋಣನಗುಡ್ಡೆ ಪುಟ್ಟನಗೌಡ ಮಾತನಾಡಿ, ಮಳೆಯಿಂದ ಮೆಕ್ಕೆಜೋಳ ಹಾಳಾಗಿದೆ. ಹಲವು ಕಡೆ ರೈತರು ಮತ್ತೆ ಬಿತ್ತನೆ ಮಾಡಿz್ದÁರೆ. ಪ್ರತಿ ಎಕರೆಗೆ ರೈತರಿಗೆ ಹದಿನೈದು ಸಾವಿರಕ್ಕೂ ಹೆಚ್ಚು ಖರ್ಚಾಗುತ್ತದೆ. ಜೌಗು ಹಿಡಿದ ಮೆಕ್ಕೆಜೋಳವನ್ನು ಹಾಗೆಯೇ ಬಿಟ್ಟರೆ ಇಳುವರಿ ಕಡಿಮೆಯಾಗುತ್ತದೆ. ಕಾಳು ಹಿಡಿಯುವುದಿಲ್ಲ ಮತ್ತು ಗುಣಮಟ್ಟವೂ ಚೆನ್ನಾಗಿರುವುದಿಲ್ಲ. ಇದರಿಂದ ಫಸಲು ಬಂದಾಗ ರೈತರಿಗೆ ನಷ್ಟವಾಗುತ್ತದೆ. ಸರ್ಕಾರ ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ರೈತ ಸಂಘದ ಪದಾಽಕಾರಿಗಳಾದ ಕೆ.ಜಿ.ಕೊಟ್ರೇಶ್, ರಾಜು, ಮುನಾ-ï, ವೀರೇಶ್, ರಾಜಣ್ಣ ಇತರರಿದ್ದರು.
ಹವಾಮಾನ ವೈಪರಿತ್ಯದಿಂದ ಸಕಾಲಕ್ಕೆ ಮಳೆಯಾಗಲಿಲ್ಲ. ಆನಂತರ ದಿಢೀರ್ ಮಳೆ ಹಿಡಿದ ಕಾರಣ ಮೆಕ್ಕೆಜೋಳ ಬೆಳೆದ ಪ್ರದೇಶ ಜೌಗು ಹಿಡಿದಿದೆ. ಈಗ ಒಂದೆರಡು ದಿನ ಬಿಸಿಲು ಬಿದ್ದಿದೆ. ಮತ್ತೆ ಮಳೆ ಹಿಡಿದರೆ ಮೆಕ್ಕೆಜೋಳ ಉಪಯೋಗಕ್ಕೆ ಬರುವುದಿಲ್ಲ. ಅತಿಯಾದ ಜೌಗು ಹಿಡಿದರೆ ರಸಗೊಬ್ಬರಗಳೂ ಕೆಲಸ ಮಾಡುವುದಿಲ್ಲ. ಹಾಗಾಗಿ ತಕ್ಷಣ ಸರ್ಕಾರ ರೈತರಿಗೆ ಸೂಕ್ತ ಸಲಹೆ ಮಾರ್ಗದರ್ಶನ ನೀಡಬೇಕು.| ದೋಣನಗುಡ್ಡೆ ಪುಟ್ಟನಗೌಡರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ