ಗಣತಿದಾರರಿಗೆ ಸರಿಯಾದ ಮಾಹಿತಿ ನೀಡಿ

Manvi Servey
ಮಾನ್ವಿ ತಾಲೂಕಿನ ಹಿರೇಕೊಟ್ನೆಕಲ್ ಗ್ರಾಮದಲ್ಲಿ ಗುರುವಾರ ಜಾತಿಗಣತಿ ಕಾರ್ಯವನ್ನು ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್ ಪರಿಶೀಲಿಸಿ, ಗಣತಿದಾರರಿಗೆ ಅಗತ್ಯ ಸಲಹೆಗಳನ್ನು ನೀಡಿದರು.
Published on

ಮಾನ್ವಿ: ನ್ಯಾಯಮೂರ್ತಿ ನಾಗಮೋಹನ್‌ದಾಸ್ ಏಕಸದಸ್ಯ ವಿಚಾರಣಾ ಅಯೋಗದ ಶಿಫಾರಸಿನಂತೆ ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿಗಾಗಿ ಸಮೀಕ್ಷೆ ಆರಂಭವಾಗಿದ್ದು, ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್ ಅವರು ಗುರುವಾರ ಹಿರೇಕೊಟ್ನೆಕಲ್ ಗ್ರಾಮಕ್ಕೆ ಭೇಟಿ ನೀಡಿ, ಗಣತಿ ಕಾರ್ಯ ಪರಿಶೀಲಿಸಿದರು.

ಮಾನ್ವಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮಾನ್ವಿ ಮತ್ತು ಸಿರವಾರ ತಾಲೂಕಿನಲ್ಲಿ ಜಾತಿಗಣತಿ ನಡೆಸಲು 271 ಗಣತಿದಾರರನ್ನು ನಿಯೋಜಿಸಲಾಗಿದೆ. ಮೇ 5 ರಿಂದ 17 ರವರೆಗೆ ಬೆಳಗ್ಗೆ 9 ರಿಂದ 1.30ರವರೆಗೆ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಪಡೆಯಲಿದ್ದಾರೆ.

30 ಮೇಲ್ವಿಚಾರಕರು ಮೇಲ್ವಿಚಾರಣೆ ನಡೆಸಲಿದ್ದಾರೆ. ಮೇ. 19 ರಿಂದ 21 ರವರೆಗೆ ವಿಶೇಷ ಶಿಬಿರಗಳಲ್ಲಿ ಜನ ಗಣತಿದಾರರಿಂದ ಸಮೀಕ್ಷೆ ನಡೆಯಲಿದೆ. ಮೇ 19 ರಿಂದ 23 ರವರೆಗೆ ಅನ್‌ಲೈನ್‌ನಲ್ಲಿ ಸ್ವಯಂ ಘೋಷಣೆ ಮಾಡಿಕೊಳ್ಳಲು ಅವಕಾಶವಿದೆ.

ಸಮೀಕ್ಷೆ ವೇಳೆ ಎಸ್ಸಿ ವರ್ಗದವರು ಮೂಲ ಜಾತಿ, ಶಿಕ್ಷಣ, ವರಮಾನ, ಉದ್ಯೋಗ ಮತ್ತು ಇತರ ಮಾಹಿತಿಯನ್ನು ಗಣತಿದಾರರಿಗೆ ನೀಡಬೇಕು. ಗಣತಿ ವೇಳೆ ಗೊಂದಲ ಉಂಟಾದಲ್ಲಿ ಪರಿಹರಿಸಲು ತಾಲೂಕು ನೋಡಲ್ ಅಧಿಕಾರಿಯನ್ನಾಗಿ ಸಿದ್ದರಾಮಪ್ಪ ಅವರನ್ನು ನೇಮಕ ಮಾಡಲಾಗಿದೆ ಎಂದು ಅಬ್ದುಲ್ ವಾಹಿದ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net