

ಮಸ್ಕಿ: ಅಂಗವಿಕಲರಿಗಾಗಿ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಬೇಕೆಂದು ಆಗ್ರಹಿಸಿ ವಿಕಲಚೇತನರ ಸಂಘ ಸಂಸ್ಥೆಗಳ ಒಕ್ಕೂಟ ಬುಧವಾರ ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಉಪಾಧ್ಯಕ್ಷೆ ಗೀತಮ್ಮ ಶಿವರಾಜ ಬುಕ್ಕಣಗೆ ಮನವಿ ಸಲ್ಲಿಸಿತು.
ಒಕ್ಕೂಟದ ತಾಲೂಕು ಅಧ್ಯಕ್ಷ ರಾರಾಯಪ್ಪ ಮಾತನಾಡಿ, ಮಸ್ಕಿ ತಾಲೂಕಿನಲ್ಲಿ ಅಂಗವಿಕಲರಿಗಾಗಿ ಸರ್ಕಾರದಿಂದ ಸಿಗುವ ಸೌಲಭ್ಯ ದೊರಕಿಸಿಕೊಡಲು, ಶೈಕ್ಷಣಿಕ, ಉದ್ಯೋಗ, ಆರೋಗ್ಯ ಹಾಗೂ ಪುನಶ್ಚೇತನಕ್ಕೆ ಸಂಬಂಧಿಸಿ ಏಳು ವರ್ಷಗಳಿಂದ ಸಂಘ ಕೆಲಸ ಮಾಡುತ್ತಿದೆ.
ಅಂಗವಿಕಲರ ಯೋಜನೆ, ಸಭೆ, ಸಮಾರಂಭ ನಡೆಸಲು ಸ್ಥಳದ ಅಭಾವವಿದ್ದು, ಪುರಸಭೆಯಿಂದ ನಿವೇಶನ ಒದಗಿಸಬೇಕೆಂದು ಕೋರಿದರು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚೇತನ ಪಾಟೀಲ್ ಹಾಗೂ ಒಕ್ಕೂಟದ ಸದಸ್ಯರು ಇದ್ದರು.