

ಹಿರೇಕೆರೂರ: ಕಾಶ್ಮೀರದಲ್ಲಿ ಉಗ್ರರ ದಾಳಿಯಿಂದ ಮೃತಪಟ್ಟ ಹಿಂದು ಪ್ರವಾಸಿಗರ ಆತ್ಮಕ್ಕೆ ಶಾಂತಿ ಕೋರಿ ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಬಿಜೆಪಿ ಮಂಡಲ ವತಿಯಿಂದ ಬುಧವಾರ ಸಂಜೆ ಮೇಣದ ಬತ್ತಿ ಹಚ್ಚುವ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ ಮಾತನಾಡಿ, ಕಾಶ್ಮೀರದಲ್ಲಿ 28 ಹಿಂದುಗಳ ಹತ್ಯೆ ಮಾಡಿದ ಉಗ್ರರನ್ನು ಕೇಂದ್ರ ಸರ್ಕಾರ ಸದೆಬಡಿಯುವ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಯೊಬ್ಬ ಭಾರತೀಯರು ಈ ಘಟನೆಯಿಂದ ನೊಂದಿದ್ದು, ವಿದೇಶಗಳು ಕೃತ್ಯವನ್ನು ಖಂಡಿಸಿವೆ. ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ದಿಟ್ಟ ನಿರ್ಧಾರ ತಗೆದುಕೊಂಡು ಉಗ್ರರನ್ನು ಬೇರು ಸಮೇತ ಕಿತ್ತು ಹಾಕಲು ಕಾರ್ಯಾಚರಣೆ ನಡೆಸಬೇಕು. ಪಾಕಿಸ್ತಾನ ಇನ್ನೆಂದು ಭಾರತದ ವಿರುದ್ಧ ಕಣ್ಣೆತ್ತಿ ನೋಡದ ಹಾಗೆ ಮಾಡಬೇಕು. ಅಂದಾಗ ಮಾತ್ರ ಇದಕ್ಕೆ ಶಾಶ್ವತ ಪರಿಹಾರ ದೊರಕಲಿದೆ ಎಂದರು.
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಲಿಂಗಾಚಾರಿ ಮಾಯಾಚಾರಿ, ಮಂಡಲ ಯುವ ಮೋರ್ಚಾ ಅಧ್ಯಕ್ಷ ಜಗದೀಶ ದೊಡ್ಡಗೌಡ್ರ, ಮಂಡಲ ರೈತ ಮೋರ್ಚಾ ಅಧ್ಯಕ್ಷ ಮನೋಹರ ಒಡ್ಡಿನಕಟ್ಟಿ, ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ದುರ್ಗೆಶ ತಿರಕಪ್ಪನವರ, ಉಮೇಶ ಬಣಕಾರ, ಹುಚ್ಚಣ್ಣ ಚೌಟಗಿ, ಮಲ್ಲಿಕಾರ್ಜುನ ಹನುಮಾಗೌಡ್ರ, ಬಸವರಾಜ ಅರಕೇರಿ, ಸಂಜೀವ ಕಬ್ಬಿಣಕಂತಿಮಠ, ಈರಣ್ಣ ಚಿಟ್ಟೂರ, ಪ್ರವೀಣ ತಳವಾರ, ಸಂತೋಷ ವಾಲಿ, ಎಂ.ಬಿ. ಕಾಗಿನೆಲ್ಲಿ, ಅಣ್ಣಯ್ಯ ಕುಬಸದ, ಮಂಜುನಾಥ್ ಪಾಟೀಲ ಹಾಗೂ ಕಾರ್ಯಕರ್ತರು ಇದ್ದರು.