ಕಾವೇರಿ ತೀರ್ಥೋದ್ಬವಕ್ಕೆ ೨ ದಿನ ರಜೆ ನೀಡಿ

praveen utthappa
Published on

ಮಡಿಕೇರಿ: ಕಾವೇರಿ ತೀರ್ಥೋದ್ಬವಕ್ಕೆ ಕನಿಷ್ಟ ಎರಡು ದಿವಸ ಸರ್ಕಾರಿ ರಜೆ ನೀಡಬೇಕು ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಒತ್ತಾಯಿಸಿದ್ದಾರೆ.


ದಸರಾ ಹಬ್ಬಕ್ಕೆ ಹತ್ತು ದಿನ ಸರ್ಕಾರಿ ರಜೆ ನೀಡಲಾಗಿತ್ತು. ಆದರೆ, ಇಂದು ನಮ್ಮ ಹಬ್ಬಗಳಿಗೆ ವಿದ್ಯಾರ್ಥಿಗಳು ಚಕ್ಕರ್ ಹೊಡೆದು ಹಬ್ಬಕ್ಕೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಾದೃಷ್ಟಕರ. ಕೂಡಲೆ ಕಾವೇರಿ ತೀರ್ಥೋದ್ಬವಕ್ಕೆ ಕೊಡಗಿನ ಸರ್ಕಾರಿ ಹಾಗೂ ಖಾಸಗಿ ಶಾಲಾಕಾಲೇಜು ಸೇರಿದಂತೆ ಕೊಡಗು ಜಿಲ್ಲೆಯ ಸರ್ಕಾರಿ ಕಛೇರಿಗಳಿಗೆ ಎರಡು ದಿವಸ ರಜೆ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.


ಈ ಸಂಬಂಧ ರಾಜ್ಯದ ಮುಖ್ಯಮಂತ್ರಿಗಳು, ಜಿಲ್ಲಾಧಿಕಾರಿಗಳು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಪತ್ರ ಬರೆದು ಒತ್ತಾಯಿಸಿರುವ ಅವರು, ಈ ಬಾರಿ ತೀರ್ಥೋದ್ಬವ ಸಂಜೆ ೭ಗಂಟೆ ೨೧ ನಿಮಿಷಕ್ಕೆ ಆಗುತ್ತಿದೆ. ಅಲ್ಲದೇ, ತುಲಾಸಂಕ್ರಮಣದ ತಯಾರಿಗಾಗಿ ಸರ್ಕಾರ ಎಷ್ಟು ಹಣ ಬಿಡುಗಡೆ ಮಾಡಿದೆ ಎಂಬ ಮಾಹಿತಿ ಇನ್ನೂ ನಿಗೂಢವಾಗಿದೆ. ಮೈಸೂರು ದಸರಾಕ್ಕೆ ಕೋಟಿ ಕೋಟಿ ಅನುದಾನವನ್ನು ಬಿಡುಗಡೆ ಮಾಡುವ ಸರ್ಕಾರ ಕಾವೇರಿ ಮಾತೆಯ ಮೇಲೆ ನಿರ್ಲಕ್ಷ್ಯ ವಹಿಸಿದೆ ಆರೋಪಿಸಿದ್ದಾರೆ.

ಫೋಟೋ: ಪ್ರವೀಣ್ ಉತ್ತಪ್ಪ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net