

ಬೋರಗಾಂವ: ಸಮೀಪದ ಢೋಣೆವಾಡಿ ಗ್ರಾಪಂಗೆ ಮಂಗಳವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷೆಯಾಗಿ ಗೀತಾಂಜಲಿ ಮಾನೆ ಹಾಗೂ ಉಪಾಧ್ಯಕ್ಷೆಯಾಗಿ ನಂದಿನಿ ಕಾಂಬಳೆ ಆಯ್ಕೆಯಾಗಿದ್ದಾರೆ.
14 ಸದಸ್ಯ ಬಲದ ಗ್ರಾಪಂನಲ್ಲಿ ಗೀತಾಂಜಲಿ ಮಾನೆ 8 ಮತ ಪಡೆದು ಸ್ನೇಹಾ ಘಾಟಗೆ ವಿರುದ್ಧ ಜಯ ಸಾಧಿಸಿ ಅಧ್ಯಕ್ಷರಾದರು. ನಂದಿನಿ ಕಾಂಬಳೆ 8 ಮತ ಪಡೆದು ಸಂಜಯ ಸೌಂದಲಗೆ ವಿರುದ್ಧ ಜಯ ಸಾಧಿಸಿ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷೆ ಗೀತಾಂಜಲಿ ಮಾನೆ ಮಾತನಾಡಿ, ಎಲ್ಲರ ಸಹಕಾರದಿಂದ ಚುನಾವಣೆಯಲ್ಲಿ ಗೆಲುವು ಸಾಸಿದ್ದು, ಢೋಣೆವಾಡಿ-ಬೋರಗಾಂವವಾಡಿ ಗ್ರಾಮ ಅಭಿವೃದ್ಧಿ ಮಾಡಲಾಗುವುದು ಎಂದರು.
ಚುನಾವಣಾಧಿಕಾರಿಯಾಗಿ ಮಹಾಂತೇಶ ಹರೋಲೆ ಕಾರ್ಯನಿರ್ವಹಿಸಿದರು. ಮೀನಾಕ್ಷಿ ಪಾಟೀಲ, ಧನಶ್ರೀ ಪಾಟೀಲ ಅವರು ಅಧ್ಯಕ್ಷ-ಉಪಾಧ್ಯಕ್ಷರನ್ನು ಸತ್ಕರಿಸಿದರು. ಪಿಡಿಒ ಸೂರಜ್ ಇಂಗಳೆ ಇದ್ದರು.