ಗೀತೆಯಿಂದ ಧಾರ್ಮಿಕ ಪ್ರಜ್ಞೆ ಜಾಗೃತ...

Book Lead
Published on

ಸುಗುಣೇಂದ್ರ ಶ್ರೀ ಆಶೀರ್ವಚನ

ಗೀತಾಂಬುಧಿ ಕಾವ್ಯಶಿಲ್ಪ ಕೃತಿ ಬಿಡುಗಡೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಭಗವದ್ಗೀತೆಯ ಪಠಣೆಯಿಂದ, ಆರಾಧನೆಯಿಂದ ಸದಾ ಧಾರ್ಮಿಕ ಪ್ರಜ್ಞೆ ಜಾಗೃತವಾಗಿರುತ್ತದೆ. ಇದಕ್ಕೆ ವಿಜ್ಞಾನಿಯಾಗಿರುವ, ಸಾಮಾನ್ಯ ಕಾರ್ಯಕರ್ತನಾಗಿದ್ದ ಕವಿರಾಜ ಅವರೇ ನಿದರ್ಶನ. ಗೀತೆಯ ಅನುಸರಣೆಯಿಂದ ಅವರು ಕವಿಯಾಗಿ, ಕೃತಿ ರಚಿಸಿರುವುದು ಸಂತಸ ತಂದಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

Book 3
ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠ, ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಮೇ 18ರಂದು ಸಂಜೆ ಆಯೋಜಿಸಿದ್ದ ಡಾ. ಎ.ಕೇಶವರಾಜ ವಿರಚಿತ ಭಗವದ್ಗೀತಾ ಪ್ರೇರಿತ ಗೀತಾಂಬುಧಿ ಕಾವ್ಯಶಿಲ್ಪ ಕೃತಿ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.

ಗೀತಾ ಪರ್ಯಾಯ

ಶ್ರೀಕೃಷ್ಣನ ಸೇವಾ ಕೈಂಕರ್ಯದ ಚತುರ್ಥ ಪರ್ಯಾಯ ಇದಾಗಿದ್ದು, ವಿಶ್ವಗೀತಾ ಪರ್ಯಾಯ ಎಂದೇ ಆಚರಿಸಲಾಗುತ್ತಿದೆ. ಕೋಟಿ ಗೀತಾ ಅಭಿಯಾನ ಮುಂದುವರಿದಿದೆ. ಈ ಸಂದರ್ಭದಲ್ಲಿ ಭಗವದ್ಗೀತೆಯ ಪ್ರೇರಣೆಯಿಂದ ರಚಿತವಾದ ಮೂರ್ನಾಲ್ಕು ಪುಸ್ತಕ ಬಿಡುಗಡೆ ಮಾಡಲಾಗಿದೆ. ಈಗ ಗೀತೆಯ ಕುರಿತಾಗಿ ಇರುವ ಇನ್ನೊಂದು ಕಾವ್ಯ ಕೃತಿಯನ್ನು ಶ್ರೀಕೃಷ್ಣನಿಗೆ ಸಮರ್ಪಿಸಿದ್ದೇವೆ ಎಂದರು.

Book 4
ಕುವೆಂಪು ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಬಿ.ಎಸ್​. ಶೇರಿಗಾರ ಶುಭಾಶಂಸನೆ ಮಾಡಿದರು. ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಕೃತಿ ಪರಿಚಯಿಸಿದರು. ಕನ್ನಡ, ತುಳು ಭಾಷಾ ತಜ್ಞೆ ಡಾ. ಸಾಯಿಗೀತಾ ಹೆಗ್ಡೆ, ಮೃತ್ಯುಂಜಯ ತೇಜಸ್ವಿ, ಶಿಲ್ಪಾ ಕೇಶವರಾಜ ಉಪಸ್ಥಿತರಿದ್ದರು.

ಪರ್ಯಾಯ ಕಿರಿಯ ಯತಿ ಸುಶ್ರೀಂದ್ರ ಶ್ರೀ ಸಾನ್ನಿಧ್ಯ ವಹಿಸಿದ್ದರು. ವಿದುಷಿ ಸುಮೇಧಾ ಆಚಾರ್ಯ, ಕುಮಾರಿ ಪ್ರಸನ್ನಾ ಬಳಗದವರು ಪ್ರಾರ್ಥನೆ ಹಾಗೂ ಗೀತಾಂಬುಧಿ ಧ್ಯೇಯಗೀತೆ ಹಾಡಿದರು. ಸುಗುಣಮಾಲಾ ಪತ್ರಿಕೆಯ ಸಂಪಾದಕ ಮಹಿತೋಷ ಆಚಾರ್ಯ ಸ್ವಾಗತಿಸಿದರು. ಮಠದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ ಭಟ್​ ವಂದಿಸಿದರು. ರಾಘವೇಂದ್ರ ಭಟ್​ ಕಾರ್ಯಕ್ರಮ ನಿರೂಪಿಸಿದರು.

ನಾನೇಕೆ ಪುಸ್ತಕ ಬರೆದೆ ಎಂದು ನನಗೆ ಗೊತ್ತಿಲ್ಲ. ಆ ಚಿಂತನೆಗೆ ಕಾರಣ ಭಗವಂತ. ಹೀಗಾಗಿ 125 ಕಾವ್ಯ ಒಳಗೊಂಡಿರುವ ಗೀತಾಂಬುಧಿ ಪುಸ್ತಕ ಏಕೆ ಬಂತು ಎನ್ನುವುದು ಕಾರಣಕರ್ತನಾದ ಶ್ರೀಕೃಷ್ಣನಿಗೇ ಗೊತ್ತು. ಆದರೆ, ಗೀತೆಯ ಕುರಿತು ಪುಸ್ತಕ ಬರೆಯಲು ಪ್ರೇರಣೆ ಪುತ್ತಿಗೆ ಸುಗುಣೇಂದ್ರ ಶ್ರೀಗಳು. | ಡಾ. ಎ.ಕೇಶವರಾಜ. ಕೃತಿಕಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net