

ಭಟ್ಕಳ: ಸ್ಕೌಟ್ ಮತ್ತು ಗೈಡ್ಸ್ ಕ್ಲಬ್-ಬುಲ್ ಬುಲ್ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಗೆ 2024-25ನೇ ಸಾಲಿನ ತಾಲೂಕು ಮಟ್ಟದ ಗೀತಾ ಗಾಯನ ಸ್ಪರ್ಧೆಯು ಪಟ್ಟಣದ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲಿಷ್ ಪದವಿಪೂರ್ವ ಕಾಲೇಜ್ನಲ್ಲಿ ಬುಧವಾರ ಆಯೋಜನೆಗೊಂಡಿತ್ತು.
ಜಿಲ್ಲಾ ಸಹಾಯಕ ಸಂಘಟನಾ ಆಯುಕ್ತೆ ಭಾರತಿ ಡಯಾಸ್ ಮಾತನಾಡಿ, ಗೀತಾ ಗಾಯನ ಸ್ಪರ್ಧೆಯು ಮಕ್ಕಳಲ್ಲಿ ಕೌಶಲ ಬೆಳೆಸಿ ವ್ಯಕ್ತಿತ್ವ ನಿರ್ವಿುಸುವಲ್ಲಿ ತಳಹದಿಯಾಗುತ್ತದೆ ಎಂದರು.
ಗೀತಾ ಗಾಯನ ಸ್ಪರ್ಧೆಯಲ್ಲಿ ಸ್ಕೌಟ್ಸ್ ವಿಭಾಗದಿಂದ ಕೆಪಿಎಸ್ಸಿ ಶಾಲೆ ತೆರ್ನಮಕ್ಕಿ ಪ್ರಥಮ ಸ್ಥಾನ, ಆರ್ಎನ್ಎಸ್ ವಿದ್ಯಾನಿಕೇತನ ದ್ವಿತೀಯ ಸ್ಥಾನ, ಗೈಡ್ಸ್ ವಿಭಾಗದಲ್ಲಿ ಸರ್ಕಾರಿ ಪ್ರೌಢಶಾಲೆ ಮುಂಡಳ್ಳಿ ಪ್ರಥಮ ಸ್ಥಾನ, ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ, ಅಳ್ವೆಕೋಡಿ ದ್ವಿತೀಯ ಸ್ಥಾನ, ರೇಂಜರ್ಸ್ ವಿಭಾಗದಲ್ಲಿ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲಿಷ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದುಕೊಂಡರು.
ಭಟ್ಕಳ ಸ್ಕೌಟ್ಸ್ ಮತ್ತು ಗೈಡ್ಸ್ನ ಎಡಿಸಿ, ಪ್ರಾಂಶುಪಾಲ ಡಾ. ವಿರೇಂದ್ರ ವಿ. ಶ್ಯಾನಭಾಗ ಅಧ್ಯಕ್ಷತೆ ವಹಿಸಿದ್ದರು. ಸ್ಕೌಟ್ಸ್ನ ಜಿಲ್ಲಾ ತರಬೇತುದಾರರಾದ ಬಿ.ಡಿ. ಫರ್ನಾಂಡಿಸ್, ಭಟ್ಕಳ ಸ್ಕೌಟ್ಸ್ ಮತ್ತು ಗೈಡ್ಸ್ ನ ಎಡಿಸಿ, ಪ್ರಕಾಶ ಶಿರಾಲಿ, ಸ್ಥಳೀಯ ಕಾರ್ಯದರ್ಶಿ ವೆಂಕಟೇಶ ಗುಬ್ಬಿಹಿತ್ತಲ್ ಮತ್ತು ಸ್ಥಳೀಯ ಖಜಾಂಚಿ ಮಂಜುನಾಥ ದೇವಾಡಿಗ, ಇತರರು ಉಪಸ್ಥಿತರಿದ್ದರು.
ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ಅಗ್ನಿ ಘಟಕದ ರೋವರ್ಸ ಸ್ಕೌಟ್ ಲೀಡರ್ ಶಿವಾನಂದ ಭಟ್ ಹಾಗೂ ರಘುನಾಥ ಶೇರುಗಾರ ಕಾರ್ಯಕ್ರಮ ನಿರ್ವಹಿಸಿದರು.