ಜಿಐಟಿ, ವೇಗಾ ಏವಿಯೇಷನ್ ಪ್ರೈ. ಲಿಮಿಟೆಡ್ ಒಡಂಬಡಿಕೆ

12Jaggu5
ಬೆಳಗಾವಿ ಕೆಎಲ್‌ಎಸ್ ಆಡಳಿತ ಮಂಡಳಿಯ ಸದಸ್ಯರು ಮತ್ತು ವೆಗಾ ಏವಿಯೇಷನ್ ಪ್ರೈವೇಟ್ ಸಂಚಾಲಕರ ಉಪಸ್ಥಿತಿಯಲ್ಲಿ ಕೆಎಲ್‌ಎಸ್ ಜಿಐಟಿ ಮತ್ತು ವೇಗಾ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಮಧ್ಯೆ ಒಡಂಬಡಿಕೆಗೆ ಮಂಗಳವಾರ ಸಹಿ ಹಾಕಲಾಯಿತು. ಪ್ರೊ.ಡಿ.ಎ.ಕುಲಕರ್ಣಿ, ಸುಹಾಸ್ ಪಿ. ಚಿಂಡಕ, ದೇವನಾಥ ಮಿರಾಜ್ಕರ್, ಶ್ರೀರಾಮ ಭಂಡಾರೆ, ರಾಜೇಂದ್ರ ಬೆಳಗಾಂವಕರ ಇತರರಿದ್ದರು.
Published on

ಬೆಳಗಾವಿ: ಕೆಎಲ್‌ಎಸ್ ಆಡಳಿತ ಮಂಡಳಿಯ ಸದಸ್ಯರು ಮತ್ತು ವೆಗಾ ಏವಿಯೇಷನ್ ಪ್ರೈವೇಟ್ ಸಂಚಾಲಕರ ಉಪಸ್ಥಿತಿಯಲ್ಲಿ ಕೆಎಲ್‌ಎಸ್ ಜಿಐಟಿ ಮತ್ತು ವೇಗಾ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಬೆಳಗಾವಿ ಮಧ್ಯೆ ಒಡಂಬಡಿಕೆಗೆ ಮಂಗಳವಾರ ಸಹಿ ಹಾಕಲಾಯಿತು

ವೆಗಾ ಏವಿಯೇಷನ್ ಪ್ರೈವೇಟ್ ಲಿಮಿಟೆಡ್, ಫೈಬರ್ ಬಲವರ್ಧಿತ ಪ್ಲಾಸ್ಟಿಕ್ ಮತ್ತು ಹೈಟೆಕ್ ಸಂಯೋಜಿತ ಉತ್ಪನ್ನಗಳನ್ನು ತಯಾರಿಸುತ್ತದೆ. ಭಾರತೀಯ ರಕ್ಷಣಾ ಇಲಾಖೆ, ರೈಲ್ವೆ, ವಾಯುಯಾನ ಉದ್ಯಮ, ಆಟೋಮೊಬೈಲ್ಸ್ ಮತ್ತು ಇತರರು ಪ್ರಮುಖ ಗ್ರಾಹಕರಾಗಿದ್ದಾರೆ. ಈ ತಿಳಿವಳಿಕೆ ಒಪ್ಪಂದವು ಕೆಎಲ್‌ಎಸ್ ಜಿಐಟಿ ಮತ್ತು ವೇಗಾ ಏವಿಯೇಷನ್ ನಡುವಿನ ಪರಿಣತಿ, ಸಂಪನ್ಮೂಲಗಳು ಮತ್ತು ವಾಯುಯಾನ ತಂತ್ರಜ್ಞಾನವನ್ನು ವಿನಿಮಯ ಮಾಡಲು ಸಹಾಯವಾಗುತ್ತದೆ. ಜತೆಗೆ ಎರಡೂ ಸಂಸ್ಥೆಗಳು ಒಟ್ಟಾಗಿ ಸಂಶೋಧನಾ ಸಹಯೋಗ ಪ್ರೋತ್ಸಾಹಿಸುತ್ತವೆ. ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಮತ್ತು ಇಂಜಿನಿಯರಿಂಗ್ ಪ್ರಾಜೆಕ್ಟ್ ಕಾಮಗಾರಿಗಳಲ್ಲಿ ತೊಡಗಿಸಿಕೊಳ್ಳಲು ಅಮೂಲ್ಯ ಅವಕಾಶಗಳನ್ನು ಒದಗಿಸುತ್ತವೆ. ಈ ಪ್ರಯತ್ನವು ಪ್ರಯೋಗಾಲಯದಲ್ಲಿ ಸಂಯೋಜಿತ ವಸ್ತುಗಳನ್ನು ಪರೀಕ್ಷಿಸಲು ಅತ್ಯಾಧುನಿಕ ಸೌಲಭ್ಯಗಳನ್ನು ಸ್ಥಾಪಿಸುವ ಗುರಿ ಹೊಂದಿದೆ. ಜಿಐಟಿಯ ಪ್ರಾಚಾರ್ಯ ಪ್ರೊ.ಡಿ.ಎ.ಕುಲಕರ್ಣಿ, ಕೆಎಲ್‌ಎಸ್ ಮ್ಯಾನೇಜ್‌ಮೆಂಟ್ ಸದಸ್ಯರು ಈ ನೂತನ ಒಡಂಬಡಿಕೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಸುಹಾಸ್ ಪಿ. ಚಿಂಡಕ, ದೇವನಾಥ ಮಿರಾಜ್ಕರ್, ಶ್ರೀರಾಮ ಭಂಡಾರೆ, ರಾಜೇಂದ್ರ ಬೆಳಗಾಂವಕರ, ಪ್ರೊ.ಡಿ.ಎ.ಕುಲಕರ್ಣಿ ಮತ್ತು ಪ್ರಾಧ್ಯಾಪಕ ವರ್ಗವಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net