

ಧಾರವಾಡ: ರಾಜ್ಯಮಟ್ಟದ 40ನೇ ಟೆಕ್ವಾಂಡೋ ಕ್ರೀಡಾಕೂಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಪಾಲಾಕ್ಷ ಪೋದಾರ್ ಜಂಬೋ ಕಿಡ್ಸ್ ಮತ್ತು ಪಾಲಾಕ್ಷ ಪೋದಾರ್ ಲನ್ಸ್ ಸ್ಕೂಲ್‌ನ ಇಬ್ಬರು ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪಾಲಾಕ್ಷ ಎಜುಕೇಶನ್ ಟ್ರಸ್ಟ್ ಸಹಯೋಗದೊಂದಿಗೆ ಬೆಂಗಳೂರಿನ ಶ್ರೀ ಸಾಯಿ ಪ್ಯಾಲೇಸ್‌ನಲ್ಲಿ ಜೂ. 23ರಿಂದ 25ರವರೆಗೆ ರಾಜ್ಯಮಟ್ಟದ ಟೆಕ್ವಾಂಡೋ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು.
ಪೋದಾರ್ ಜಂಬೋ ಕಿಡ್ಸ್ ವಿದ್ಯಾರ್ಥಿ ಅದಿರ ಎಂ. ಹಿರೇಮಠ 18 ಕೆಜಿ ಒಳಗಿನ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾಳೆ. ಮುಮ್ಮಿಗಟ್ಟಿಯ ಪಾಲಾಕ್ಷ ಪೋದಾರ್ ಲನ್ಸ್ ಸ್ಕೂಲ್‌ನ ವಿದ್ಯಾರ್ಥಿನಿ ಅದಿತಿ ಕಂಬಳಿ 47 ಕೆಜಿ ಒಳಗಿನ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾಳೆ. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕ ಆನಂದ ಕಿಟದಾಳ ಟೆಕ್ವಾಂಡೋ ತರಬೇತಿ ನೀಡಿದ್ದರು.