ಹೆಣ್ಣು ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಬೇಡಿ

8-kollegal-2,,
ಕೊಳ್ಳೇಗಾಲದ ಶ್ರೀ ವಾಸವಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಬಿ.ವರ್ಷಾ ಮಾತನಾಡಿದರು. ಎ.ಡಿ.ಕುಮಾರಕೃಷ್ಣ, ಅನಿತಾ ಗಿರೀಶ್, ರವಿಕುಮಾರ್, ಮಧುಕುಮಾರ್, ದಯಾ ಪ್ರಸಾದ್ ಇದ್ದರು.
Published on

ಕೊಳ್ಳೇಗಾಲ: ಸೋಷಿಯಲ್ ಮೀಡಿಯಾಗಳಲ್ಲಿ ಹೆಣ್ಣು ಮಕ್ಕಳು ಫೋಟೋಗಳನ್ನು ಹಾಕಬಾರದು ಎಂದು ಪಟ್ಟಣ ಪೊಲೀಸ್ ಠಾಣೆ ಸಬ್‌ಇನ್‌ಸ್ಪೆ ಕ್ಟರ್ ಬಿ.ವರ್ಷಾ ಸಲಹೆ ನೀಡಿದರು.

ಪಟ್ಟಣದ ಶ್ರೀವಾಸವಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಫೇಸ್‌ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣು ಮಕ್ಕಳು ಫೋಟೋಗಳು, ಸ್ನೇಹಿತರ ಫೋಟೋ, ಕುಟುಂಬದ ಫೋಟೋಗಳನ್ನು ಹಾಕುವುದು ಸಾಮಾನ್ಯವಾಗಿದೆ. ಈ ಬೆಳವಣಿಯಿಂದ ಮುಂದಿನ ದಿನಗಳಲ್ಲಿ ಅಪಾಯವನ್ನು ಎದುರಿಸಬೇಕಾಗಬಹುದು ಎಂದು ಹೇಳಿದರು.

ದುಷ್ಕರ್ಮಿಗಳು ಸಾಮಾಜಿಕ ಜಾಲತಾಣದಲ್ಲಿ ಸಿಗುವ ಹೆಣ್ಣುಮಕ್ಕಳ ಫೋಟೋಗಳನ್ನು ದುರ್ಬಳಕ್ಕೆ ಮಾಡಿಕೊಳ್ಳುತ್ತಾರೆ. ಇದರಿಂದ ತಮಗೆ ಅರಿವಿಲ್ಲದೆ ತೊಂದರೆಗೆ ಸಿಲುಕುತ್ತೀರಿ, ಈ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಳ್ಳಬೇಡಿ ಎಂದು ಸಲಹೆ ನೀಡಿದರು.

ತಂದೆ-ತಾಯಿ, ಹಿರಿಯರು, ಶಿಕ್ಷಕರ ಸಲಹೆ, ಸೂಚನೆಗಳನ್ನು ಮಕ್ಕಳು ಕೇಳಬೇಕು. ಓದಿನ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಪಾಲಕರಿಗೆ ಗೌರವ ತರುವ ಕೆಲಸ ಮಾಡಬೇಕು. ಇಡೀ ಸಮಾಜ ಗುರುತಿಸುವ ರೀತಿ ಬದುಕಬೇಕು. ಉನ್ನತ ಸ್ಥಾನ-ಮಾನಗಳನ್ನು ಪಡೆದುಕೊಂಡು ಸಾಧನೆ ಮಾಡಬೇಕು ಎಂದು ತಿಳಿಸಿದರು.

ಶ್ರೀ ವಾಸವಿ ವಿದ್ಯಾಸಂಸ್ಥೆ ಆಡಳಿತ ಮಂಡಳಿಯಿಂದ ಪಿಎಸ್‌ಐ ಬಿ.ವರ್ಷಾ ಅವರನ್ನು ಸನ್ಮಾನಿಸಲಾಯಿತು. ಶ್ರೀ ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಎ.ಡಿ.ಕುಮಾರಕೃಷ್ಣ, ಸಂಯೋಜಕ ಅನಿತಾ ಗಿರೀಶ್, ಪ್ರಾಂಶುಪಾಲ ರವಿಕುಮಾರ್, ಮಧು ಕುಮಾರ್, ಪ್ರಾಂಶುಪಾಲ ದಯಾಪ್ರಸಾದ್, ವಾಸವಾಂಬ, ಮುಖ್ಯ ಶಿಕ್ಷಕಿ ಗೀತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net