ಬಾಲಕಿ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ

13_08_2025_KLR_FLAP_8A
ಬಾಲಕಿಯ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸುವ ಮುಂಚೆ ತಹಸೀಲ್ದಾರ್​ ವೆಂಕಟೇಶಪ್ಪ, ಸಬ್​ ಇನ್​ಸ್ಪೆಕ್ಟರ್​ ರಾಜಣ್ಣ ಇತರರು ಸ್ಥಳ ಪರಿಶೀಲಿಸಿದರು.
Published on

ಬಂಗಾರಪೇಟೆ : ಮೂರು ತಿಂಗಳ ಹಿಂದೆ ಕೆರೆಗೆ ಬಿದ್ದು ಮೃತಪಟ್ಟಿದ್ದ ಬಾಲಕಿಯ ಮೃತದೇಹವನ್ನು ತಹಸೀಲ್ದಾರ್​ ವೆಂಕಟೇಶಪ್ಪ ಅವರ ಸಮ್ಮುಖದಲ್ಲಿ ಮಂಗಳವಾರ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸ ಲಾಯಿತು. ಬಾವರಹಳ್ಳಿಯ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ಸುನಿತಾ ಮಂಜುನಾಥ್​ ದಂಪತಿ ಪುತ್ರಿ ಮೀನಾಕ್ಷಿ (11) ಎಂಬ ಬಾಲಕಿ ಗ್ರಾಮದ ಕೆರೆ ಬಳಿ 2025ರ ಮೇ 4 ರಂದು ನಡೆದುಕೊಂಡು ಬರುತ್ತಿದ್ದಾಗ ಕೆರೆಗೆ ಬಿದ್ದು ಮೃತಪಟ್ಟಿದ್ದರು. ಆದರೆ ಪಾಲಕರು ಪೊಲೀಸ್​ ಠಾಣೆಗೆ ಮಾಹಿತಿ ನೀಡದೆ ಅಂತ್ಯಸಂಸ್ಕಾರ ನೆರವೇರಿಸಿದ್ದರು.

ಅಂತ್ಯಕ್ರಿಯೆ ನೆರವೇರಿಸಿದ 3 ತಿಂಗಳ ನಂತರ ಪೊಲೀಸ್​ ಕಂಟ್ರೋಲ್​ ರೂಂಗೆ ಮಾಹಿತಿ ನೀಡಿ ಬಾಲಕಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಅಂತ್ಯಕ್ರಿಯೆ ನಡೆಸಿದ ಸ್ಥಳಕ್ಕೆ ಆಗಮಿಸಿ ಶವ ಹೊರತೆಗೆದು ಕೋಲಾರ ಎಸ್​ಎನ್​ಆರ್​ ಆಸ್ಪತ್ರೆಗೆ ವೈದ್ಯರಿಂದ ತಹಸೀಲ್ದಾರ್​ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮೃತರ ಪಾಲಕರು, ಸಂಬಂಧಿಕರು ಹಾಜರಿದ್ದರೂ ಸಹ ಯಾರನ್ನೂ ಅಂತ್ಯಸಂಸ್ಕಾರ ನಡೆಸದ ಸ್ಥಳಕ್ಕೆ ಬರದಂತೆ ಸೂಕ್ತ ಪೊಲೀಸ್​ ಬಂದೋಬಸ್ತ ವ್ಯವಸ್ಥೆ ಮಾಡಲಾಗಿತ್ತು. ಮಗಳ ಸಾವಿನ ಕುರಿತು ಹಲವು ಅನುಮಾನಗಳು ಪಾಲಕರನ್ನು ಕಾಡುತ್ತಿದ್ದವು. ಈಗ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಎಲ್ಲ ಅನುಮಾನಗಳಿಗೆ ಸ್ಪಷ್ಟ ಉತ್ತರ ಸಿಗಲಿದೆ. ಬಂಗಾರಪೇಟೆ ಸಬ್​ ಇನ್​ಸ್ಪೆಕ್ಟರ್​ ರಾಜಣ್ಣ, ಎಎಸ್​ಐ ವಿಜಯಕುಮಾರ್​, ಆರ್​ಐ ಅಜಯ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net