ಶಂಕಿತ ಡೆಂಘೆ ಜ್ವರಕ್ಕೆ ಬಾಲಕಿ ಬಲಿ

Dengue
Published on

ಬ್ಯಾಡಗಿ: ತಾಲೂಕಿನ ಮಾಸಣಗಿ ಗ್ರಾಮದಲ್ಲಿ ಶಂಕಿತ ಡೆಂಘ ಜ್ವರದಿಂದ ದೀಕ್ಷಾ ರಾಮಪ್ಪ ಬನ್ನಿಹಟ್ಟಿ (9) ಎನ್ನುವ ಬಾಲಕಿ ಶನಿವಾರ ಮೃತಪಟ್ಟ ಘಟನೆ ಜರುಗಿದೆ. ಬಾಲಕಿಗೆ ಜೂ. 24ರಂದು ಸ್ವಲ್ಪ ಮಟ್ಟಿಗೆ ಜ್ವರ ಕಾಣಿಸಿಕೊಂಡಿತ್ತು. ಸ್ಥಳೀಯ ಖಾಸಗಿ ಆಸ್ಪತ್ರೆ, ಹಾವೇರಿ ಜಿಲ್ಲಾಸ್ಪತ್ರೆ ಹಾಗೂ ಮಣಿಪಾಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದ್ದು, ಬಾಲಕಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ವರದಿಯಾಗಿದೆ.

ತಾಲೂಕಿನಲ್ಲಿ ಪ್ರಸಕ್ತ ಸಾಲಿನ ಮೇ, ಜೂನ್, ಜುಲೈನಲ್ಲಿ 70ಕ್ಕೂ ಹೆಚ್ಚು ಪ್ರಕರಣ ಡೆಂಘ ಜ್ವರವೆಂದು ಪತ್ತೆಯಾಗಿವೆ. ಈ ಪೈಕಿ ಶೇ. 98 ರಷ್ಟು ಪ್ರಕರಣದಲ್ಲಿ ಜ್ವರಪೀಡಿತರು ಸಂಪೂರ್ಣ ಗುಣವಾಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಮೂವರು ಸೇರಿದಂತೆ ಈಗ ಮಾಸಣಗಿ ಗ್ರಾಮದ ಬಾಲಕಿ ಸೇರಿ ಒಟ್ಟು ನಾಲ್ವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net