ಹಿಮಾಚಲ ಪ್ರದೇಶದ ಸಿಎಂ ಮನಗೆದ್ದ ಹರಿನಂದ

harinandA
Published on

ಕಾಸರಗೋಡು: ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಕಾಸರಗೋಡಿನ 5ನೇ ತರಗತಿ ವಿದ್ಯಾರ್ಥಿನಿಯ ಹಾಡನ್ನು ತಮ್ಮ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ.

‘ಏಕ್ ಭಾರತ್ ಶ್ರೇಷ್ಠ ಭಾರತ್’ ಅಭಿಯಾನ ಅಂಗವಾಗಿ ಕಾಸರಗೋಡಿನ ವಿದ್ಯಾನಗರ ಕೇಂದ್ರೀಯ ವಿದ್ಯಾಲಯ-2ರ ವಿದ್ಯಾರ್ಥಿನಿ ಹರಿನಂದ ಹಾಡಿದ ಹಿಮಾಚಲಿ ಹಾಡನ್ನು ಸಿಎಂ ಹಂಚಿಕೊಂಡಿದ್ದು, ಮಗಳು ಹರಿನಂದಳ ಉಜ್ವಲ ಭವಿಷ್ಯಕ್ಕಾಗಿ ದೇವರ ನಾಡಾದ ಹಿಮಾಚಲ ಪ್ರದೇಶದ ಶುಭಾಶಯಗಳು ಎಂದು ಅಭಿನಂದನಾ ಸಂದೇಶ ಬರೆದಿದ್ದಾರೆ.

ಹರಿನಂದ ಅವರು ಪಯ್ಯನ್ನೂರ್ ಕಂಕೋಲ್‌ನ ಶಿಕ್ಷಕ ದಂಪತಿ ಜಗದೀಶ್ - ರೇಖಾ ಅವರ ಪುತ್ರಿ. ವಿದ್ಯಾನಗರ ಕೇಂದ್ರೀಯ ವಿದ್ಯಾಲಯದ ಶಿಕ್ಷಕಿ ದೀಪಿಕಾ ಠಾಕೂರ್ ‘ಅಮ್ಮ ಪುಚಿ’ ಹಾಡು ಕಲಿಸಿದ್ದರು.

ಹಿಮಾಚಲಿ ಪಹದಿ ಜಾನಪದ ಗೀತೆಗಳನ್ನು ಹಾಡಿದ ಪಟ್ಟೋಮ್ ಕೇಂದ್ರೀಯ ವಿದ್ಯಾಲಯದ ಒಂಬತ್ತನೇ ತರಗತಿ ವಿದ್ಯಾರ್ಥಿನಿ ದೇವಿಕಾ ಅವರ ವಿಡಿಯೋವನ್ನೂ ಸಿಎಂ ತಮ್ಮ ಎಫ್‌ಬಿ ಪ್ರೊಫೈಲ್ ಮೂಲಕ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net