ಮಲತಂದೆಯಿಂದ ಬಾಲಕಿ ಮೇಲೆ ಅತ್ಯಾಚಾರ

Crime
Published on

ಉಳ್ಳಾಲ: ಪಾವೂರು ಗ್ರಾಮದಲ್ಲಿ 9 ವರ್ಷದ ಬಾಲಕಿಯ ಮೇಲೆ ಆಕೆಯ ಮಲತಂದೆಯೊಬ್ಬ ಅತ್ಯಾಚಾರವೆಸಗಿದ್ದು, ಆರೋಪಿ ಅಶ್ವಥ್(25) ಎಂಬಾತನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.

ಹೊರಜಿಲ್ಲೆಯಿಂದ ಬಂದ ಕುಟುಂಬ ಪಾವೂರಿನಲ್ಲಿ ನೆಲೆಸಿದ್ದು, ಸಂತ್ರಸ್ತ ಬಾಲಕಿಯ ತಂದೆ ಮೃತಪಟ್ಟ ಬಳಿಕ ಬಾಲಕಿಯ ತಾಯಿ ಅಶ್ವಥ್ ಜತೆ ಸಂಸಾರ ನಡೆಸುತ್ತಿದ್ದರು. ಗರ್ಭಿಣಿಯಾದ ಅವರು ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರಿಂದ ಅಶ್ವಥ್ ಹಾಗೂ ಬಾಲಕಿ ಮನೆಯಲ್ಲಿದ್ದರು. ಮಂಗಳವಾರ ಬೆಳಗ್ಗೆ ಆರೋಪಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ವಿಪರೀತ ರಕ್ತಸ್ರಾವ ಆದ ಹಿನ್ನೆಲೆಯಲ್ಲಿ ಬಾಲಕಿಯನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಆರೋಪಿಯೇ ಕರೆದೊಯ್ದಿದ್ದಾನೆ. ವೈದ್ಯರು ಪರೀಕ್ಷಿಸಿದಾಗ ಪ್ರಕರಣ ಬೆಳಕಿಗೆ ಬಂದು ಕೊಣಾಜೆ ಠಾಣೆಗೆ ಮಾಹಿತಿ ನೀಡಿದ್ದರಿಂದ ಅಲ್ಲಿಂದಲೇ ಆರೋಪಿಯನ್ನು ಬಂಧಿಸಿದ ಕೊಣಾಜೆ ಪೊಲೀಸರು ಪ್ರಕರಣವನ್ನು ಪಾಂಡೇಶ್ವರ ಮಹಿಳಾ ಠಾಣೆಗೆ ಹಸ್ತಾಂತರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net