ಬೈಕ್ ಡಿಕ್ಕಿಯಾಗಿ ಬಾಲಕಿ ಮೃತ್ಯು

pranamya
ಪ್ರಣಮ್ಯ
Published on

ಕಾರ್ಕಳ: ಬೆಳ್ಮಣ್ ಸಮೀಪದ ನಂದಳಿಕೆ ಕ್ರಾಸ್ ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಸಾವನಪ್ಪಿದ್ದಾಳೆ. ನಂದಳಿಕೆ ನಿವಾಸಿ ಪ್ರಣಮ್ಯ ಶೆಟ್ಟಿ (14) ಮೃತ ಬಾಲಕಿ. ನಂದಳಿಕೆಯ ಲಕ್ಷ್ಮೀ ಜನಾರ್ದನ ದೇವಾಲಯದ ಪೂಜೆಗೆಂದು ಹೆದ್ದಾರಿ ಬದಿ ನಡೆದುಕೊಂಡು ಹೋಗುವ ಸಂದರ್ಭ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ. ಈಕೆ ಮುಲ್ಲಡ್ಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹತ್ತನೆ ತರಗತಿ ವಿದ್ಯಾರ್ಥಿನಿ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net