

ದೇವದುರ್ಗ: ಗಬ್ಬೂರು ಹೋಬಳಿಯ ಹೊನ್ನಟಗಿ ಗ್ರಾಮದಲ್ಲಿ ಹಾವು ಕಡಿತದಿಂದ ನಾಲ್ಕು ವರ್ಷದ ಬಾಲಕಿ ಶನಿವಾರ ಮೃತಪಟ್ಟಿದ್ದಾಳೆ.
ಸಿರಿಯಮ್ಮ ರಮೇಶ(4) ಮೃತ ಬಾಲಕಿ. ಮನೆಯಲ್ಲಿ ಮಲಗಿದ್ದ ವೇಳೆ ಶುಕ್ರವಾರ ತಡರಾತ್ರಿ ಹಾವು ಕಚ್ಚಿದೆ. ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.
ಗಬ್ಬೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.