ಜೋಕಾಲಿಯ ಸೀರೆ ಕುತ್ತಿಗೆಗೆ ಸಿಲುಕಿ ಬಾಲಕಿ ಮೃತ್ಯು

New Project
girl death in karkala
Published on

ಕಾರ್ಕಳ: ಜೋಕಾಲಿಯಲ್ಲಿ ಆಟವಾಡುತ್ತಿದಾಗ ಕುತ್ತಿಗೆಗೆ ಸೀರೆಯ ಜೋಕಾಲಿ ಬಿಗಿದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಕೆಮ್ಮಣ್ಣುವಿನಲ್ಲಿ ನಡೆದಿದೆ.

ಶುಕ್ರವಾರ ಮನೆಯ ಸಮೀಪದಲ್ಲಿ ಸೀರೆಯ ಜೋಕಾಲಿ ಕಟ್ಟಿ ಆಟವಾಡುವ ಸಂದರ್ಭದಲ್ಲಿ ಸೀರೆ ಕುತ್ತಿಗೆಗೆ ಬಿಗಿದು ಬಾಲಕಿ ಮಾನ್ವಿ (9) ಮೃತಪಟ್ಟಿದ್ದಾಳೆ. ಎಂದಿನಂತೆ ಶುಕ್ರವಾರ ದೇವಾಲಯಕ್ಕೆ ಮಧ್ಯಾಹ್ನ ತೆರಳಿ ಬಳಿಕ ಮನೆಯ ಪಕ್ಕದಲ್ಲಿ ಕಟ್ಟಲಾದ ಸೀರೆಯ ಜೋಕಾಲಿಯಲ್ಲಿ ಆಡುತ್ತಿರುವ ಸಂದರ್ಭ ಘಟನೆ ನಡೆದಿದೆ. ಕೆಮ್ಮಣ್ಣು ಪ್ರಾಥಮಿಕ ಶಾಲೆಯಲ್ಲಿ 4 ನೇ ತರಗತಿಯ ವಿದ್ಯಾರ್ಥಿಯಾಗಿದ್ದಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net