

ಕಳಸ: ಹಿರೇಬೈಲ್‌ನ ಇಡಕಣಿ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಪಿ ಗಿರೀಶ್ ಹೆಮ್ಮಕ್ಕಿ ಉಪಾಧ್ಯಕ್ಷರಾಗಿ ಎಂ.ಸಿ.ಸಂತೋಷ್ ಆಯ್ಕೆಯಾಗಿದ್ದಾರೆ. ಇಡಕಣಿ ಸಹಕಾರ ಸಂಘದ 12 ನಿರ್ದೇಶಕರಿಗಾಗಿ ಕಳೆದ ಒಂದು ತಿಂಗಳ ಹಿಂದೆ ಚುನಾವಣೆ ನಡೆದಿತ್ತು. ಮತದಾನದ ನಂತರ ಕೆಲ ತಾಂತ್ರಿಕ ಕಾರಣಗಳಿಗೆ ಹೈಕೋರ್ಟ್ ಲಿತಾಂಶಕ್ಕೆ ತಡೆ ನೀಡಿತ್ತು. ೆ.16ಕ್ಕೆ ಚುನಾವಣಾ ಲಿತಾಂಶ ಘೋಷಣೆ ಮಾಡಲಾಗಿತ್ತು.
ಚುನಾವಣೆಯಲ್ಲಿ ಗಿರೀಶ್ ಹೆಮ್ಮಕ್ಕಿ, ಹಿರೇಬೈಲು ಗೋವರ್ಧನ್, ಬರಗಲ್ ಭೋಜರಾಜ್, ಎಡೂರು ವಿದ್ಯಾಸಾಗರ್, ಎಂ.ಸಿ.ಸಂತೋಷ್ ಮರಸಣಿಗೆ, ನಾಗೇಶ್ ಇಡಕಿಣಿ. ಹರೀಶ್ ಹಿರೇಬೈಲ್, ರಾಜೇಶ್ ಮರಸಣಿಗೆ, ಸಂಗೀತ ಹೆಮ್ಮಕ್ಕಿ, ವೃಂದಾವತಿ ಹೆಮ್ಮಕ್ಕಿ, ವೈಶಾಲಿ ಹಾಗೂ ಮರಸಣಿಗೆ ವೆರೋನಿಕಾ ಕ್ರಾಸ್ತಾ ಚುನಾಯಿತರಾಗಿದ್ದರು. ಶುಕ್ರವಾರ ಗಿರೀಶ್ ಹೆಮ್ಮಕ್ಕಿ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಎಂ.ಸಿ.ಸಂತೋಷ ಅವರನ್ನು ಉಪಾಧ್ಯಕ್ಷರನ್ನಾಗಿ ಅವಿರೋದ ಆಯ್ಕೆ ಮಾಡಲಾಯಿತು.