

ಮಡಿಕೇರಿ:
ದಕ್ಷಿಣ ಅಮೆರಿಕಾದ ಗಯಾನಾದಲ್ಲಿ ಜು. 14ಕ್ಕೆ ಅನಾರೋಗ್ಯದಿಂದ ಮೃತಪಟ್ಟಿದ್ದ ಮಡಿಕೇರಿ ತಾಲೂಕು ಮದೆನಾಡು ಗ್ರಾಮದ ಪಿ.ಬಿ. ಗಿರೀಶ್ ಅಂತ್ಯಸAಸ್ಕಾರ ಬುಧವಾರ ಸ್ವಗ್ರಾಮದಲ್ಲಿ ನಡೆಯಿತು. ಬೆಂಗಳೂರಿನಿAದ ಆಂಬುಲೆನ್ಸ್ನಲ್ಲಿ ಬೆಳಗ್ಗೆ 7 ಗಂಟೆ ಸುಮಾರಿಗೆ ತರಲಾದ ಗಿರೀಶ್ ಮೃತ ದೇಹವನ್ನು ಸ್ವಗೃಹದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಜಿ.ಪಂ. ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ, ಸೇರಿದಂತೆ ಹಲವವರು ಮೃತದೇಹದ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಶಾಂತ್ವನ ಹೇಳಿದರು. ನಂತರ 11.20ಕ್ಕೆ ಅಂತ್ಯಸAಸ್ಕಾರ ನೆರವೇರಿಸಲಾಯಿತು.
ಪಿ.ಬಿ. ಗಿರೀಶ್ ದಕ್ಷಿಣ ಅಮೆರಿಕಾದ ಗಯಾನಾದಲ್ಲಿ ಶೆರಿಫ್ ಜನರಲ್ ಆಸ್ಪತ್ರೆ ಎನ್ನುವ ಆಸ್ಪತ್ರೆಯಲ್ಲಿ ಸ್ಟಾಪ್‌ನರ್ಸ್ ಆಗಿ ಸುಮಾರು ಎರಡು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದರು. 2025 ರ ಜು. 3 ರಂದು ಅನಾರೋಗ್ಯದಿಂದಾಗಿ ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಅವರನ್ನು ಭಾರತಕ್ಕೆ ಕರೆತಂದು ಇಲ್ಲಿ ಚಿಕಿತ್ಸೆ ಮುಂದುವರಿಸುವ ಬಗ್ಗೆ ಕುಟುಂಬಸ್ಥರು ನಿರ್ಧರಿಸಿದರಾದರೂ ಆರ್ಥಿಕ ಮುಗ್ಗಟ್ಟಿನ ಕಾರಣ ಈ ಪ್ರಯತ್ನ ಫಲಕೊಟ್ಟಿರಲಿಲ್ಲ. ನಂತರ ಚಿಕಿತ್ಸೆ ವೇಳೆಯಲ್ಲಿ ಅಲ್ಲಿಯೇ ಬಹು ಅನಿಯಮಿತ ರಕ್ತಸ್ರಾವದ ಹೃದಯಘಾತದಿಂದ ಜು. 14 ರಂದು ಮೃತಪಟ್ಟಿದ್ದರು.