

ಉಡುಪಿ: ವೈವಿಧ್ಯದಲ್ಲಿ ಏಕತೆ ಹೊಂದಿರುವ ದೇಶದಲ್ಲಿ ವಿವಿಧ, ಧರ್ಮ, ಭಾಷೆೆ, ಸಂಸತಿಗಳು ಸಮ್ಮಿಳಿತವಾಗಿದ್ದು, ಸಮಾಜದಲ್ಲಿ ಗಿರಿಜನರ ಕಲೆಯನ್ನು ಮುನ್ನೆಲೆಗೆ ತಂದು ಪ್ರೋತ್ಸಾಹಿಸಬೇಕು ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಪೆರ್ಡೂರು ಸುಬ್ರಾಯ ಕಲ್ಯಾಣ ಮಂಟಪದಲ್ಲಿ ಬುಧವಾರ ಗಿರಿಜನ ಉತ್ಸವ ಸಾಂಸತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವೈವಿಧ್ಯಮಯ ಕಲಾಪ್ರಕಾರಗಳನ್ನು ಗುರುತಿಸುವ ಮೂಲಕ ಗಿರಿಜನರ ಪ್ರತಿಭೆಯನ್ನು ಸಮಾಜದ ಮುಖ್ಯವಾಹಿನಿಗೆ ತಂದು ಕಲಾವಿದರನ್ನು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸದೃಢರನ್ನಾಗಿಸಬೇಕು ಎಂದರು.
ಪೆರ್ಡೂರು ಗ್ರಾಪಂ ಅಧ್ಯಕ್ಷೆ ಚೇತನಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಕಲಾವಿದ ಮಹಾಬಲ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಕಲಾವಿದರಿಂದ ಸುಗಮ ಸಂಗೀತ, ಪಟ ಕುಣಿತ, ಡೋಲು ಮತ್ತು ಕೊಳಲು ವಾದನ, ಕೊರಗರ ಮಹಿಳಾ ಸಾಂಸತಿಕ ವೈಭವ, ಚಿಲಿಪಿಲಿ ಗೊಂಬೆ, ಪುಣ್ಯಕೋಟಿ ನೃತ್ಯ ರೂಪಕ, ಹೋಳಿ ಕುಣಿತ, ಕುಣಿತ ಭಜನೆ, ಯಕ್ಷಗಾನ ವೈಭವ, ಕರಗ ಕೋಲಾಟ, ಚೆಂಡೆವಾದನ, ಬೇಡರ ಕುಣಿತ ಮೊದಲಾದ ಸಾಂಸತಿಕ ಕಾರ್ಯಕ್ರಮ ನಡೆಯಿತು. ಕೊರಗ ಸಂಘದ ಜಿಲ್ಲಾ ಅಧ್ಯಕ್ಷೆ ಗೌರಿ, ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀಧರ ಗೌಡ, ಮತ್ತು ಮರಾಟಿ ಯುವ ಸಾಂಸತಿಕ ಕಲಾ ಮತ್ತು ಕ್ರೀಡಾ ಸಂಘದ ಅಧ್ಯಕ್ಷ ರವಿ ನಾಯ್ಕ್ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ವಾಣಿ ಪೆರ್ಡೂರು ನಿರೂಪಿಸಿ, ಪ್ರತಿಕ್ಷಾ ವಂದಿಸಿದರು.