ಗಿರಿಜನ ಗೌಡಲು ಸಂಘದಿಂದ ವಿದ್ಯಾರ್ಥಿಗಳಿಗೆ ಸನ್ಮಾನ

kls1 (7)
Published on

ಕಳಸ: ಕಳಸ ತಾಲೂಕು ಗಿರಿಜನ ಗೌಡಲು ಕ್ಷೇಮಾಭಿವೃದ್ಧಿ ಸಂಘದಿಂದ ಕಳಸ ತಾಲೂಕು ವ್ಯಾಪ್ತಿಯಲ್ಲಿ 2024-25 ನೆ ಸಾಲಿನಲ್ಲಿ ಶೇ.80 ಅಂಕ ಪಡೆದ ದ್ವಿತೀಯ ಪಿಯುಸಿಯ 7, ಎಸ್‌ಎಸ್‌ಎಲ್‌ಸಿಯ 10 ವಿದ್ಯಾರ್ಥಿಗಳು, ಮೂಡಿಗೆರೆ ಲ್ಯಾಂಪ್ಸ್ ಸಹಕಾರ ಸಂಘದ ಸಿಇಒ ರಾಮು, ಕರ್ನಾಟಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಜಿಲ್ಲಾ ಅನುಷ್ಠಾನ ಸಮಿತಿ ನಾಮ ನಿರ್ದೇಶಿತ ಸದಸ್ಯರಾದ ಶ್ರೀನಿವಾಸ ಗೌಡ ಅವರನ್ನು ಅಭಿನಂದಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕಿ ಸೀತಮ್ಮ ಸಮಾಜ ಇಲಾಖೆ ಸೌಲಭ್ಯಗಳು ಪ್ರೋತ್ಸಾಹ ಧನ, ಹಾಸ್ಟೆಲ್ ವ್ಯವಸ್ಥೆ ಗಳ ಬಗ್ಗೆ ಮಾಹಿತಿ ನೀಡಿದರು. ಕೆಪಿಎಸ್ ಶಾಲೆ ಶಿಕ್ಷಕ ಶಿವಪ್ಪ , ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಮುಜೇಕಾನು, ಕಾರ್ಯದರ್ಶಿ ಗಣೇಶ್ ಕುಕ್ಕೋಡು, ಖಜಾಂಚಿ ಬಾಲಕೃಷ್ಣ, ಮುಖಂಡರುಗಳಾದ ಜಿ.ಪಿ ಚಂದ್ರು, ಕಸ್ತೂರಿ, ಸತೀಶ್ ಹಿರೇಬೈಲು, ಶ್ರೀನಿವಾಸ್ ಹೊರನಾಡು, ಸುರೇಶ್‌ಬಿಳಿಗಲ್, ದಿನೇಶ್, ಸುರೇಶ್ ಕರ್ನಾಳಿ, ಸತೀಶ್ ಒಡ್ಡಿಕಟ್ಟೆ, ನಿರ್ದೇಶಕರಾದ ನಾಗೇಂದ್ರ, ರವಿಕಿರಣ್, ಸುಧಾಕರ, ರಾಜೇಶ್ ಮಲಗಾರು, ಮೇಘಾನಂದ ಬೇಡಕ್ಕಿ ಕವಿತಾ ಚಂದ್ರು, ಅನ್ನಪೂರ್ಣ ಮುಮ್ಮಗೆ, ರಜನಿ, ಪುಷ್ಪಲತಾ, ಗಿರಿಜಾ ಬೇಡಕ್ಕಿ, ಅಶ್ವಿನಿ, ರಮ್ಯಾ ಸವಿತಾ ಸ್ವಾಗತಿಸಿ, ಅಶ್ವಿನಿ ಕುಕ್ಕೊಡು, ಶಿಕ್ಷಕಿ ರೇವತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net