

ಕಾಸರಗೋಡು: ಶ್ರೀ ಸ್ಕಂಘ ಯಕ್ಷಗಾನ ಕೇಂದ್ರ ಪಾಯಿಚ್ಚಾಲಿನ ಚಿಣ್ಣರಿಂದ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರ ಪಂಚಮ ಚಾತುರ್ಮಾಸ್ಯದ ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಗಿರಿಜಾ ಕಲ್ಯಾಣ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಕೇಂದ್ರದ ಹದಿನೈದು ಮಂದಿ ಬಾಲ ಕಲಾವಿದರು ಪ್ರದರ್ಶನ ನೀಡಿದರು. ಹಿಮ್ಮೇಳದಲ್ಲಿ ಭಾಗವತರಾಗಿ ತಲ್ಪನಾಜೆ ವೆಂಕಟ್ರಮಣ ಭಟ್, ಚೆಂಡೆಯಲ್ಲಿ ಪೃಥ್ವಿಚಂದ್ರ ಶರ್ಮ ಪೆರುವಡಿ ಹಾಗೂ ಮದ್ದಳೆಯಲ್ಲಿ ಲವಕುಮಾರ್ ಐಲ, ಚಕ್ರತಾಳದಲ್ಲಿ ಅರ್ಪಿತ್ ಶೆಟ್ಟಿ, ವಸ್ತ್ರಾಲಂಕಾರದಲ್ಲಿ ರಾಕೇಶ್ ಗೋಳಿಯಡ್ಕ ಸಹಕರಿಸಿದರು. ನಾಟ್ಯಗುರು ರಂಜಿತ್ ಗೋಳಿಯಡ್ಕ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅರ್ಜುನ್ ಕೂಡ್ಲು, ಆಕಾಶ್ ಕೂಡ್ಲು, ಶ್ರೀವತ್ಸ, ಶ್ರೀ ಸ್ಕಂದ ಯಕ್ಷಗಾನ ಕೇಂದ್ರ ಅಧ್ಯಕ್ಷ ಕಿರಣ್ ಪ್ರಸಾದ್ ಕೂಡ್ಲು, ಕೋಶಾಧಿಕಾರಿ ಮುರಳೀಧರ ಶೆಟ್ಟಿ, ಕಾರ್ಯದರ್ಶಿ ಕಿರಣ್ ಪಾಯಿಚ್ಚಾಲು ಸಹಕರಿಸಿದರು.