

ಬೆಂಗಳೂರು: ಗುಣಮಟ್ಟದ ಗೃಹೋಪಯೋಗಿ ವಸ್ತುಗಳ ಮಾರಾಟಕ್ಕೆ ಹೆಸರಾಗಿರುವ ಗಿರಿಯಾಸ್ ರಾಜಧಾನಿಯಲ್ಲಿ ಮಾರಾಟ ಜಾಲ ವಿಸ್ತರಿಸಿದೆ. ಎಲೆಕ್ಟ್ರಾನಿಕ್ಸ್ ಸಿಟಿಯ 1ನೇ ಹಂತದ ನೀಲಾದ್ರಿನಗರದಲ್ಲಿ 85ನೇ ಮೆಗಾಸ್ಟೋರ್ ತೆರೆದಿದೆ.
ದೊಡ್ಡತೂಗೂರು ಗ್ರಾ.ಪಂ. ಅಧ್ಯಕ್ಷ ಬಿ.ಕೆ. ಅನಿಲ್ಕುಮಾರ್ ಮಳಿಗೆ ಉದ್ಘಾಟಿಸಿದರು. 10 ಸಾವಿರ ಚದರಡಿ ವಿಸ್ತೀರ್ಣದ ಮಳಿಗೆ ಹವಾನಿಯಂತ್ರಿತ ವ್ಯವಸ್ಥೆ ಹೊಂದಿದೆ. ಗ್ರಾಹಕರಿಗೆ ವಿಶೇಷ ಶಾಪಿಂಗ್ ಅನುಭವ ನೀಡಲಿದೆ.
ಒಂದೇ ಸೂರಿನಡಿ ಟಿವಿ, ರೆಫ್ರಿಜರೇಟರ್, ವಾಷಿಂಗ್ವುಷಿನ್, ಬ್ಯ್ರಾಂಡೆಡ್ ಮೊಬೈಲ್ಗಳು ಸೇರಿ ಎಲೆಕ್ಟ್ರಿಕಲ್ಸ್, ಎಲೆಕ್ಟ್ರಾನಿಕ್ಸ್ ಹಾಗೂ ಗೃಹಬಳಕೆಯ ಉತ್ಪನ್ನಗಳನ್ನು ಕೈಗೆಟುಕುವ ಬೆಲೆಗೆ ಮಾರಾಟ ಮಾಡುವ ಮೂಲಕ ಗಿರಿಯಾಸ್ ತನ್ನ ಸೇವಾ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ.
ಹಿಟಾಚಿ ಏರ್ ಕಂಡೀಷನಿಂಗ್ ಇಂಡಿಯಾ ಲಿಮಿಟೆಡ್ನ ನಿರ್ದೇಶಕ ಸಂಜೀವ್ ಅಗರ್ವಾಲ್, ಗಿರಿಯಾಸ್ನ ನಿರ್ದೇಶಕ ಎಚ್.ಆರ್.ಗಿರಿಯಾ, ಮನೀಶ್ ಗಿರಿಯಾ ಮತ್ತಿತರರು ಉಪಸ್ಥಿತರಿದ್ದರು.
ವಿಶೇಷ ಕೊಡುಗೆ ಲಭ್ಯ: ಮಳಿಗೆ ಸ್ಥಾಪನೆ ಹಿನ್ನೆಲೆಯಲ್ಲಿ ಗಿರಿಯಾಸ್ ಫೆ. 23ರವರೆಗೆ ವಿಶೇಷ ಕೊಡುಗೆ ಘೋಷಿಸಿದೆ. ಮಳಿಗೆಯಲ್ಲಿ ವಸ್ತು ಖರೀದಿಸಿ ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿಸುವವರಿಗೆ ಸೇವಾ ಶುಲ್ಕದಿಂದ ವಿನಾಯಿತಿ ಮತ್ತು ಕೇವಲ 1 ರೂ. ಡೌನ್ ಪೇಮೆಂಟ್ ಮಾಡಿ ಉತ್ಪನ್ನ ಖರೀದಿಸಲು ಅವಕಾಶ ನೀಡಲಾಗಿದೆ. ಆಕರ್ಷಕ ಬಹುಮಾನ ಮತ್ತು ರಿಯಾಯಿತಿಯನ್ನೂ ನೀಡಲಾಗುತ್ತಿದೆ.