ಮತ್ತೆ ಐವರಲ್ಲಿ ಕರೊನಾ ಪಾಸಿಟಿವ್

18 hunasagi 01
Published on

ಯಾದಗಿರಿ: ಜಿಲ್ಲೆಯಲ್ಲಿ ಸೋಮವಾರ ಮತ್ತೆ ಐದು ಜನರಲ್ಲಿ ಕರೊನಾ ಪಾಸಿಟಿವ್ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 10ಕ್ಕೆ ಏರಿದೆ.

ಮಹಾರಾಷ್ಟ್ರದಿಂದ ವಾಪಸಾಗಿರುವ 25 ವರ್ಷದ ಮಹಿಳೆ (ಪಿ-1188), 25 ವರ್ಷದ ಪುರುಷ (ಪಿ-1189), 30 ವರ್ಷದ ಪುರುಷ (ಪಿ-1190), 15 ವರ್ಷದ ಯುವಕ (ಪಿ-1191) ಮತ್ತು 30 ವರ್ಷದ ಪುರುಷ (ಪಿ-1192) ಸೋಂಕಿತರಾಗಿದ್ದು, ಜಿಲ್ಲಾ ಕೋವಿಡ್ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೂಮರ್ಾರಾವ್ ತಿಳಿಸಿದ್ದಾರೆ.

ಮೂರ್ನಾಲ್ಕು ದಿನಗಳಿಂದ ಜಿಲ್ಲೆಗೆ ಸಾವಿರಾರು ಸಂಖ್ಯೆಯಲ್ಲಿ ಹೊರ ರಾಜ್ಯಗಳಿಂದ ಕಾಮರ್ಿಕರು ಆಗಮಿಸುತ್ತಿದ್ದು, ಕ್ವಾರಂಟೈನ್ ಕ್ಯಾಂಪ್ಗಳಲ್ಲಿ ಇರಿಸಲಾಗಿದೆ. ಎರಡೇ ದಿನದಲ್ಲಿ ಸೋಂಕಿತರ ಸಂಖ್ಯೆ 10ಕ್ಕೆ ಏರಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ. ಬರುವ ದಿನಗಳಲ್ಲಿ ಸೋಂಕಿನ ಸಂಖ್ಯೆ ಇನ್ನೂ ಹೆಚ್ಚಾಗಲಿದೆ ಎಂಬ ಮಾತು ಕೇಳಿಬರುತ್ತಿವೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net